ಟೋಕಿಯೋ ಒಲಿಂಪಿಕ್ಸ್: ದೀಪಿಕಾ ಕುಮಾರಿಗೆ ಗೆಲುವು, ಪ್ರಿ ಕ್ವಾರ್ಟರ್ ಫೈನಲ್‌ಗೇರಿದ ಆರ್ಚರ್

ಟೋಕಿಯೋ, ಜುಲೈ 28: ಭಾರತದ ಆರ್ಚರ್ ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಯುಎಸ್‌ಎಯ ಜೆನ್ನಿಫರ್ ಮುಸಿನೊ ಫರ್ನಾಂಡೀಸ್ ವಿರುದ್ಧ ಜಯ ಸಾಧಿಸಿದ್ದಾರೆ. ತೀವ್ರ ಪೈಪೋಟಿಯ ಸೆಣೆಸಾಟದಲ್ಲಿ ದೀಪಿಕಾ ಕುಮಾರಿ 6-4 ಅಂತರದಿಂದ ಗೆದ್ದು ಬೀಗಿದ್ದಾರೆ. ಈ ಮೂಲಕ ಮತ್ತೊಂದು ಸುತ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ವಿಶ್ವದ ನಂಬರ್ 1 ಆರ್ಚರ್ ಆಗಿರುವ ದೀಪಿಕಾ ಕುಮಾರಿ ಒಲಿಂಪಿಕ್ಸ್‌ನಲ್ಲಿ 9ನೇ ಸ್ಥಾನಿಯಾಗಿ ತಮ್ಮ ಸೆಣೆಸಾಟವನ್ನು ಆರಂಭಿಸಿದ್ದಾರೆ. ಅಂತಿಮ ಹದಿನಾರರ ಘಟ್ಟದತ್ತ ದೀಪಿಕಾ ಕುಮಾರಿ ಈಗ ತಮ್ಮ ಚಿತ್ತವನ್ನು ನೆಟ್ಟಿದ್ದಾರೆ. ಭಾರತದ ಪರವಾಗಿ ಅರ್ಹತೆ ಪಡೆದಿರುವ ಏಕೈಕ ಮಹಿಳಾ ಆರ್ಚರ್ ಆಗಿದ್ದಾರೆ ದೀಪಿಕಾ ಕುಮಾರಿ.
ಯುಎಸ್‌ಎಯ ಜೆನ್ನಿಫರ್ ಮುಸಿನೊ ಫರ್ನಾಂಡೀಸ್ ದೀಪಿಕಾ ಕುಮಾರಿಗೆ ಸಾಕಷ್ಟು ಕಠಿಣ ಪೈಪೋಟಿಯನ್ನು ನೀಡಿದರು. ಆದರೆ ಅಂತಿಮವಾಗಿ ದೀಪಿಕಾ ಈ ಪಂದ್ಯದಲ್ಲಿ ಮೇಲಯಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದಾರೆ ದೀಪಿಕಾ ಕುಮಾರಿ.
ಇಂದು ಬೆಳಿಗ್ಗೆ ನಡೆದ 64ರ ಘಟ್ಟದ ಪಂದ್ಯದಲ್ಲಿ ದೀಪಿಕಾ ಭೂತಾನ್‌ನ ಕರ್ಮ ಅವರ ವಿರುದ್ಧ ಪೈಪೋಟಿಯನ್ನು ನಡೆಸಿದ್ದರು. ಗಾಳಿಯಿಂದ ಕೂಡಿದ್ದ ಕಠಿಣ ಪರಿಸ್ಥಿತಿಯಲ್ಲಿ ದೀಪಿಕಾ ಕುಮಾರಿ ಭಾರೀ ಸವಾಲನ್ನು ಎದುರಿಸಿ ಗೆಲುವು ಸಾಧಿಸಿದ್ದರು. ಈ ಮೂಲಕ ಎರಡನೇ ಸುತ್ತಿನ ಸವಾಲಿಗೆ ಅರ್ಹತೆ ಪಡೆದರು. ಇನ್ನು ಇದಕ್ಕೂ ಮುನ್ನ ದೀಪಿಕಾ ಕುಮಾರಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ನೀರಸ ಪ್ರದರ್ಶನ ನೀಡಿ ಆಘಾತ ಅನುಭವಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications