ವಿಂಟರ್ ಒಲಿಂಪಿಕ್ಸ್ 2022: ಭಾರತದ ಏಕೈಕ ಸ್ಪರ್ಧಿ ಉದ್ಘಾಟನಾ ಸಮಾರಂಭದಲ್ಲಿ ಭಾಗಿ

ಬೀಜಿಂಗ್‌ನಲ್ಲಿ ವಿಂಟರ್ ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ ದೊರೆತಿದೆ. ಈ ಕ್ರೀಡಾಕೂಟಕ್ಕೆ ಭಾರತ ಸಹಿತ ಸಾಕಷ್ಟು ರಾಷ್ಟ್ರಗಳು ರಾಜತಾಂತ್ರಿಕ ಬಹಿಷ್ಕಾರ ಹಾಗಿದೆ. ಹಾಗಾಗಿ ಭಾರತದಿಂದ ಈ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿರುವ ಏಕೈಕ ಸ್ಪರ್ಧಿ ಆರಿಫ್ ಖಾನ್ ದೇಶಗಳ ಪೆರೇಡ್‌ನಲ್ಲಿ ಭಾಗವಹಿಸಿದ್ದಾರೆ. ಆರಿಫ್ ಖಾನ್ ಭಾರತದ ರಾಷ್ಟ್ರಧ್ವಜವನ್ನು ಹಿಡಿದು ಮುನ್ನಡೆದಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ಅನ್ನು ಆಯೋಜನೆ ಮಾಡಿದ್ದ ಬರ್ಡ್ಸ್ ನೆಸ್ಟ್ ಸ್ಟೇಡಿಯಂನಲ್ಲಿ ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದಿದೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರಿಫ್ ಖಾನ್ ಕೆಂಪು ಜಾಕೆಟ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲಲ್ಇ ಆರಿಫ್ ಖಾನ್ ಅವರಿಗೆ ಅವರ ಬೆಂಬಲ ಸಿಬ್ಬಂದಿಗಳು ಸಾಥ್ ನೀಡಿದ್ದರು. ವಿಂಟರ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಆರಿಫ್ ಖಝಾನ್ ಬಗ್ಗೆ ಬೀಜಿಂಗ್ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಸಹಿತ ಸಾಕಷ್ಟು ಕ್ರೀಡಾಪಟಿಗಳು ಅಭಿನಂದಿಸಿದ್ದಾರೆ.
ಕಳೆದ 13 ವರ್ಷಗಳಲ್ಲಿ ಭಾರತದ ಯಾವ ಕ್ರೀಡಾಪಟು ಕೂಡ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಅರ್ಹತೆಯನ್ನು ಪಡೆಯಲು ವಿಫಲವಾಗಿದ್ದರು. ಆದರೆ ಈ ಬಾರಿಯ ವಿಂಟರ್ ಒಲಿಂಪಿಕ್ಸ್‌ಗೆ ಆರಿಫ್ ಖಾನ್ ಅರ್ಹತೆ ಸಂಪಾದಿಸುವ ಮೂಲಕ ಈ ಕೊರತೆಯನ್ನು ನೀಗಿಸಿದ್ದಾರೆ.
ಇನ್ನು ಆರಿಫ್ ಖಾನ್ ಈ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಲು ಕೂಡ ಸಜ್ಜಾಗಿದ್ದಾರೆ. ಭಾರತದ ಯಾವ ಕ್ರೀಡಾಪಟು ಕೂಡ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಎರಡು ವಿಭಿನ್ನ ವಿಭಾಗದಲ್ಲಿ ಅರ್ಹತೆ ಸಂಪಾದಿಸಿದ ಸಾಧನೆ ಮಾಡಿರಲಿಲ್ಲ. ಆದರೆ ಆರಿಫ್ ಖಾನ್ ಮೊದಲ ಬಾರಿಗೆ ವಿಶೇಷ ಸಾಧನೆ ಮಾಡಿದ್ದಾರೆ.
ಹಾಜಿಬಲ್ ತಂಗ್ಮಾರ್ಗ್ ಪ್ರದೇಶದ 31ರ ಹರೆಯದ ಆರಿಫ್ ಖಾನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈವರೆಗೆ ಜಗತ್ತಿನಾದ್ಯಂತ ಸ್ಕೀಯಿಂಗ್‌ನ 127 ಅಂತರಾಷ್ಟ್ರೀಯ ಈವೆಂಟ್‌ಗಳಲ್ಲಿ ಭಾಗವಹಿಸಿದ ಸಾಧನೆ ಮಾಡಿರುವುದಾಗಿಯೂ ಆರಿಫ್ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರಿಫ್ ಖಾನ್ "ನನಗೊಂದು ಕನಸಿತ್ತು ಅದು ಈಗ ನನಸಾಗುತ್ತಿದೆ. ನನ್ನ ತಂದೆ ನನಗಾಗಿ ಕಂಡ ಕನಸು ನನಸಾಗಲು ನಾನು ಸಾಕಷ್ಟು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಅದೀಗ ನನಸಾಗುತ್ತಿರುವುದು ಅದ್ಭುತ ಅನುಭವ ನೀಡುತ್ತಿದೆ" ಎಂದು ಬೀಜಿಂಗ್ ವಿಮಾನ ಹತ್ತುವುದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದರು. ಆರಿಪ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications