ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಭಾರತಕ್ಕೆ ಮೊದಲ ಪದಕ
ನವದೆಹಲಿ, ಮೇ 11: ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿಪಟು ಹರ್ಪ್ರೀತ್ ಸಿಂಗ್ ಕಂಚಿನ ಪದಕ ತಂದಿದ್ದಾರೆ. ಇದು ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಬಂದ ಮೊದಲ ಪದಕವಾಗಿದೆ.
ಬುಧವಾರ ರಾತ್ರಿ ನಡೆದ ಗ್ರೆಕೋ ರೋಮನ್ ನ 80 ಕೆಜಿ ವಿಭಾಗದ ತೃತೀಯ, ಚತುರ್ಥ ಸ್ಥಾನಗಳಿಗಾಗಿ ನಡೆದ ಪಂದ್ಯದಲ್ಲಿ ಹರ್ಪ್ರೀತ್, ಚೀನಾದ ನಾ ಜುಂಜೈಲ್ ವಿರುದ್ಧ 3-2 ಅಂಕಗಳ ಅಂತರದಲ್ಲಿ ಜಯ ಸಾಧಿಸಿದರು. ಈ ಮೂಲಕ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.

ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಹರ್ಪ್ರೀತ್ ಅವರು ಜಪಾನ್ ನ ಮೀಟಾ ಯುಯಾ ವಿರುದ್ಧ 2-1 ಅಂಕಗಳ ಅಂತರದಲ್ಲಿ ಜಯ ಸಾಧಿಸಿ ಕ್ರೀಡಾಕೂಟದ ಮುಖ್ಯ ಸುತ್ತಿಗೆ ಪದಾರ್ಪಣೆ ಮಾಡಿದ್ದರು.
ಕೈತಪ್ಪಿದ ಮತ್ತೊಂದು ಪದಕ: ಬುಧವಾರದಂದು, ಗ್ರೆಕೋ ರೋಮನ್ ವಿಭಾಗದಲ್ಲೇ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಸಿಗುವ ಸಾಧ್ಯತೆಯಿತ್ತು. ಆದರೆ, ಅದು ನೆರವೇರಲಿಲ್ಲ.
ಗ್ರೆಕೋ ರೋಮನ್ 75 ಕೆಜಿ ವಿಭಾಗದ ಮೂರನೇ ಹಾಗೂ ನಾಲ್ಕನೇ ಸ್ಥಾನಗಳಿಗಾಗಿ ಸ್ಪರ್ಧಿಸಿದ್ದ ಭಾರತದ ಮತ್ತೊಬ್ಬ ಕುಸ್ತಿಪಟು ಗುರುಪ್ರೀತ್ ಸಿಂಗ್, ಕಜಕಿಸ್ತಾನದ ಮಕ್ಸಟ್ ಯೆರೆಝೆಪೊವ್ ವಿರುದ್ಧ 6-8 ಅಂಕಗಳ ಅಂತರದಲ್ಲಿ ಸೋಲು ಕಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications