ಏಷ್ಯನ್ ಗೇಮ್ಸ್: ಟೇಬಲ್ ಟೆನಿಸ್ ನಲ್ಲಿ ಅಚಂತ-ಮಣಿಕಾ ಜೋಡಿಗೆ ಕಂಚು

ಜಕಾರ್ತಾ, ಆಗಸ್ಟ್ 29: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಟೇಬಲ್ ಟೆನಿಸ್ ನಲ್ಲಿ ಭಾರತಕ್ಕೆ ಕಂಚು ಲಭಿಸಿದೆ. ಟಿಟಿ ಮಿಶ್ರ ಡಬಲ್ಸ್ ನಲ್ಲಿ ಭಾರತದ ಅಚಂತ ಶರತ್ ಕಮಲ್-ಮಣಿಕಾ ಭಾತ್ರಾ ಜೋಡಿ ಕಂಚು ಜಯಿಸಿದ್ದಾರೆ.
ಆಗಸ್ಟ್ 28ರ ಬುಧವಾರ ನಡೆದ ಟೇಬಲ್ ಟೆನಿಸ್ ಸೆಮಿ ಫೈನಲ್ ನಲ್ಲಿ ಭಾರತದ ಜೋಡಿ ಚೀನಾ ಜೋಡಿಯ ಎದುರು 1-4ರ ಹಿನ್ನಡೆ ಅನುಭವಿಸಿತು. ಹೀಗಾಗಿ ಕಂಚು ಭಾರತದ ಪಾಲಾಗಿದೆ. ಇದು ಭಾರತಕ್ಕೆ ಲಭಿಸಿದ 51ನೇ ಪದಕವಾಗಿದೆ. ಭಾರತ ಪದಕ ಪಟ್ಟಿಯಲ್ಲಿ ಈಗ 9ನೇ ಸ್ಥಾನದಲ್ಲಿದೆ.
ಮಂಗಳವಾರ (ಆಗಸ್ಟ್ 28) ನಡೆದ 4X400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತ್ತು. ಇಬ್ಬರು ಪುರುಷರು ಮತ್ತಿಬ್ಬರು ಮಹಿಳೆಯರನ್ನೊಳಗೊಂಡ ದೇಸಿ ತಂಡ 400 ಮೀಟರನ್ನು ನಾಲ್ಕನೇ ಸುತ್ತಿಗೆ 3:15.71 ಸೆಕೆಂಡ್ ಗಳಲ್ಲಿ ಮುಗಿಸಿ ಬೆಳ್ಳಿ ತನ್ನದಾಗಿಸಿಕೊಂಡಿತ್ತು.
Story first published: Wednesday, August 29, 2018, 17:17 [IST]
Other articles published on Aug 29, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications