ಏಷ್ಯನ್ ಗೇಮ್ಸ್ 2018: ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರ

ಜಕಾರ್ತಾ, ಸೆಪ್ಟೆಂಬರ್ 1: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯಾನ್ ಗೇಮ್ಸ್ ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತ ಚಿನ್ನವನ್ನು ತನ್ನದಾಗಿಸಿಕೊಂಡಿದೆ. ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತದ ಪ್ರಣಬ್ ಬರ್ಧನ್ ಮತ್ತು ಶಿಬ್ನಾತ್ ದೈಶೇಖರ್ ಜೋಡಿ ಚಿನ್ನ ಜಯಿಸಿದೆ.
ಸೆಪ್ಟಂಬರ್ 1ರ ಶನಿವಾರ ನಡೆದ ಬ್ರಿಡ್ಜ್ ಪೇರ್ ಫೈನಲ್ ಸ್ಪರ್ಧೆಯಲ್ಲಿ ಭಾರತ 15ನೇ ಬಂಗಾರವನ್ನು ತನ್ನ ಪದಕ ಖಾತೆಗೆ ಸೇರಿಸಿಕೊಂಡಿತು. ಈ ಬಂಗಾರದೊಂದಿಗೆ ಭಾರತದ ಪದಕ ಖಾತೆಯಲ್ಲೀಗ 67 ಪದಕಗಳು ಸೇರಿಕೊಂಡಿದ್ದು, ಭಾರತ 8ನೇ ಸ್ಥಾನದಲ್ಲಿದೆ.
ಅಗಸ್ಟ್ 31ರ ಶುಕ್ರವಾರ ನಡೆದ ಮಹಿಳಾ ಹಾಕಿ ಫೈನಲ್ ನಲ್ಲಿ ಜಪಾನ್ ಎದುರು ಭಾರತ ಬೆಳ್ಳಿ ಜಯಿಸಿತ್ತು. ಇದರಲ್ಲಿ ಭಾರತ 1-2ರ ಹಿನ್ನಡೆ ಅನುಭವಿಸಿತ್ತು. 2014ರ ಇಂಚಿಯಾನ್ ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿತ್ತು.
ಬ್ರಿಡ್ಜ್ ಇದೊಂದು ಇಸ್ಪೀಟ್ ರೀತಿಯ ಟ್ರಿಕ್ಕಿ ಗೇಮ್. 52 ಇಸ್ಪೀಟ್ ಕಾರ್ಡ್ ಗಳನ್ನು ಬಳಸಿ ಆಡುತ್ತಾರೆ. ಆಟದ ಮೂಲ ಮಾದರಿಯಲ್ಲಿ ಇಬ್ಬಿಬ್ಬರು ಜೋಡಿಯಂತೆ ಒಟ್ಟು ನಾಲ್ಕು ಮಂದಿ ಈ ಆಟವನ್ನು ಆಡುತ್ತಾರೆ. ಪಾರ್ಟ್ನರ್ ಗಳು ಪರಸ್ಪರ ಎದುರುಬದುರಾಗಿ ಕೂತಿರುತ್ತಾರೆ. ಬ್ರಿಡ್ಜ್ ನಲ್ಲಿ ಮಿಶ್ರ ಟೀಮ್ ಸ್ಪರ್ಧೆಯೂ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications