ಏಷ್ಯನ್ ಗೇಮ್ಸ್: ಶೂಟಿಂಗ್ ನಲ್ಲಿ ಅಪೂರ್ವಿ-ರವಿಕುಮಾರ್ ಗೆ ಕಂಚು

ಜಕಾರ್ತಾ, ಆಗಸ್ಟ್ 19: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮಿಕ್ಸ್ಡ ಟೀಮ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಂದೇಲಾ ಮತ್ತು ರವಿಕುಮಾರ್ ಜೋಡಿಗೆ ಕಂಚು ಒಲಿದಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಭಾನುವಾರ (ಆಗಸ್ಟ್ 19) ನಡೆದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಜೋಡಿ ಕಂಚು ತನ್ನದಾಗಿಸಿಕೊಂಡಿತು. ಅಪೂರ್ವಿ-ರವಿಕುಮಾರ್ ಒಟ್ಟು 835.3 ಪಾಯಿಂಟ್ ಗಳೊಂದಿಗೆ ಪದಕ ಜಯಿಸಿದರು. ಇದೇ ವಿಭಾಗದಲ್ಲಿ ಪದಕ ಭರವಸೆ ಮೂಡಿಸಿದ್ದ ಮನು ಭಾಕರ್ ನಿರಾಸೆ ಅನುಭವಿಸುವಂತಾಯ್ತು.
ಈ ವಿಭಾಗದಲ್ಲಿ ಭಾರತ ಬಂಗಾರ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಬಂಗಾರದ ಪದಕ ಚೈನೀಸ್ ತೈಪೆ ಪಾಲಾಯಿತು. ಉತ್ತಮ ಪ್ರದರ್ಶನ ನೀಡಿದ ಚೀನಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಮಿಕ್ಸ್ಡ್ ಟೀಮ್ ವಿಭಾಗದಲ್ಲಿ ಮನು ಭಾಕರ್ ಮತ್ತು ಅಭಿಷೇಕ್ ವರ್ಮಾ ಜೋಡಿ 759 ಅಂಕ ಕಲೆ ಹಾಕಿತು. ಆದರೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲು ಈ ಅಂಕ ನೆರವಾಗಲಿಲ್ಲ.
Story first published: Sunday, August 19, 2018, 15:18 [IST]
Other articles published on Aug 19, 2018
Read in English: India win mixed air rifle bronze
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications