For Quick Alerts
ALLOW NOTIFICATIONS  
For Daily Alerts

ಏಷ್ಯನ್ ಕಂಚು ಗೆದ್ದು ಬಂದು ಟೀ ಮಾರೋ ಕಾಯಕ ಶುರುವಿಟ್ಟವನ ಕತೆ!

Asian Games 2018 bronze-medallist Harish Kumar sells tea on return to India

ನವದೆಹಲಿ, ಸೆಪ್ಟೆಂಬರ್ 8: ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶವೇ ಅಷ್ಟು ಸುಲಭಕ್ಕೆ ದಕ್ಕೋದಿಲ್ಲ. ಅಂಥದ್ದರಲ್ಲಿ ಇಲ್ಲೊಬ್ಬರು ಪ್ರತಿಷ್ಠಿತ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದು ಬಂದು ಟೀ ಮಾರಲು ಶುರುವಿಟ್ಟುಕೊಳ್ಳುವ ಮೂಲಕ ಭಾವನೆ ಕೆದಕಿದ್ದಾರೆ.

ಬಹುಶಃ ಭಾರತದಲ್ಲಿ ಹೆಚ್ಚಿನ ಕ್ರೀಡಾಪಟುಗಳ ಬದುಕು ಇಂಥದ್ದೇ ಟೀ ಪಾತ್ರೆಯೊಳಗೋ, ಗಾರ್ಬೇಜ್ ತಳ್ಳುಗಾಡಿಯೊಳಗೋ, ಎಳೆಯೋ ರಿಕ್ಷಾ ಗಾಡಿಯ ಒಳಗೋ ಇಲ್ಲವೆ ಬೇಯುತ್ತಿರೋ ಇಟ್ಟಿಗೆ ಗೂಡಿನೊಳಗೊ ಇದ್ದರೆ ಅದರಲ್ಲಿ ಅಚ್ಚರಿಯಿಲ್ಲ (ಇದ್ದಿದ್ದೂ ಇದೆ). ಹರೀಶ್ ಕುಮಾರ್ ಕತೆಯೂ ಹೀಗೆಯೇ.

ಕಷ್ಟದ ಬದುಕಿನ ನಡುವೆಯೂ ಕ್ರೀಡಾ ಪ್ರತಿಭೆಗೋಸ್ಕರ ನಮ್ಮೆದುರಲ್ಲಿ ಮಿನುಗೋ ಇಂಥ ಸಾಕಷ್ಟು ಕ್ರೀಡಾಪಟು ಭಾರತದಲ್ಲಿದ್ದಾರೆ. ಇಂಥ ಬಡ ಕ್ರೀಡಾಪಟುಗಳಿಗೆ ಸರ್ಕಾರದ ನಿಜವಾದ ಬೆಂಬಲ ಬೇಕಿದೆ. ಈ ಹಿಂದೆ ನೀವು ಏಷ್ಯನ್ ಚಿನ್ನಗೆದ್ದ ಬಡ ಹುಡುಗಿ ಸ್ವಪ್ನಾ ಬರ್ಮನ್ ಕತೆ ಕೇಳಿರಬಹುದು. ಸ್ವಪ್ನಾ ಅವರಂಥದ್ದೇ ಕಷ್ಟದ ಜೀವನ ಹೊಂದಿರುವವರ ಮತ್ತೊಂದು ಕತೆ ಇಲ್ಲಿದೆ..

ಕಂಚು ಗೆದ್ದರೂ ಟೀ ಮಾರುವ ಕಾಯಕ

ಕಂಚು ಗೆದ್ದರೂ ಟೀ ಮಾರುವ ಕಾಯಕ

ಇತ್ತೀಚೆಗಷ್ಟೇ ಇಂಡೋನೇಷ್ಯಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಸೆಪಕ್ಟಾಕ್ರಾ (ಕಿಕ್ ವಾಲಿಬಾಲ್) ತಂಡ ಸ್ಪರ್ಧೆಯಲ್ಲಿ ಹರೀಶ್ ಅವರು ಭಾರತ ಪರ ಕಂಚು ಗೆದ್ದಿದ್ದರು. ಸ್ಪರ್ಧೆ ಮುಗಿಸಿ ಭಾರತಕ್ಕೆ ಬಂದ ಹರೀಶ್ ದೆಹಲಿಯ ಮಂಜು-ಕಾ-ತಿಲ್ಲ ಕಾಲನಿಯಲ್ಲಿ ತನ್ನ ತಂದೆಯ ಪುಟ್ಟ್ ಟೀ ಶಾಪ್ ನಲ್ಲಿ ಟೀ ಮಾರುವ ಕಾಯಕ ಶುರುವಿಟ್ಟುಕೊಂಡಿದ್ದಾರೆ!

ಸೆಪಕ್ಟಾಕ್ರಾದಲ್ಲಿ ಭಾರತಕ್ಕೆ ಮೊದಲ ಪದಕ

ಸೆಪಕ್ಟಾಕ್ರಾದಲ್ಲಿ ಭಾರತಕ್ಕೆ ಮೊದಲ ಪದಕ

ಕೈಗಳನ್ನು ತಾಗಿಸದೆ ಬರೀ ಕಾಲಿನ ಮೂಲಕವೇ ಚೆಂಡನ್ನು (ವಾಲಿಬಾಲ್ ಆಟದಂತೆ) ಆಚೆ ಕೋರ್ಟಿಗೆ ಮುಟ್ಟಿಸುವ ಈ ವಿಶಿಷ್ಟ ಆಟದಲ್ಲಿ ಭಾರತ, ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿದ್ದು ಈ ಬಾರಿಯೇ ಮೊದಲು. ಮೊದಲು ಸ್ಪರ್ಧಿಸಿಯೂ ಭಾರತ ತಂಡ ಪದಕ ಗೆದ್ದಿದ್ದು ವಿಶೇಷ ಅನ್ನಿಸಿತ್ತು.

ತುಂಬು ಕುಟುಂಬ, ಕಷ್ಟದ ಜೀವನ

ತುಂಬು ಕುಟುಂಬ, ಕಷ್ಟದ ಜೀವನ

ಹರೀಶ್ ಅವರನ್ನು ಮಾತನಾಡಿಸಿದಾಗ, 'ನಮ್ಮ ಕುಟುಂಬ ದೊಡ್ಡದು. ತುಂಬಾ ಜನರಿದ್ದಾರೆ. ಹಾಗಾಗಿ ಬದುಕಿನ ಬಂಡಿ ಮುನ್ನಡೆಯಲು ನಾನೀ ಟೀಪಾತ್ರೆಯನ್ನು ಬೆಚ್ಚಗಿರಿಸಲೇಬೇಕು. ಕುಟುಂಬಕ್ಕೆ ನೆರವು ನೀಡುವ ಸಲುವಾಗಿ ನಾನು ನನ್ನ ತಂದೆಯೊಟ್ಟಿಗೆ ಚಹಾದಂಗಡಿಯಲ್ಲಿ ಕಳೆಯುತ್ತೇನೆ' ಎಂದು ಆಚೆಯಿಂದ ಬಂದ ಉತ್ತರ ಭಾವಜೀವಿಗಳನ್ನು ಕಾಡುವಂತಿತ್ತು.

ದೇಶಕ್ಕಾಗಿ ಇನ್ನೂ ಗೆಲ್ಲುತ್ತೇನೆ

ದೇಶಕ್ಕಾಗಿ ಇನ್ನೂ ಗೆಲ್ಲುತ್ತೇನೆ

'ಈ ಕ್ರೀಡೆಯನ್ನು ನಾನು 2011ರಿಂದ ಆಡಲಾರಂಭಿಸಿದೆ. ನನ್ನ ಕೋಚ್ ಹೇಮರಾಜ್ ಅವರು ನನ್ನನ್ನು ಕ್ರೀಡಾರಂಗಕ್ಕೆ ಎಳೆತಂದು ಪ್ರೋತ್ಸಾಹಿಸಿದರು. ಅವರೇ ನನ್ನನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಪರಿಚಯಿಸಿದ್ದು. ಅನಂತರ ನಂಗೆ ಕ್ರೀಡೆಗೆ ಸಂಬಂಧಿಸಿ ಸ್ವಲ್ಪ ಬೆಂಬಲ ಸಿಕ್ಕಿತು. ಈಗಲೂ ನಾನು ದಿನನಿತ್ಯ ತರಬೇತಿ ಮಾಡುತ್ತೇನೆ. ಮುಂದೆಯೂ ದೇಶಕ್ಕಾಗಿ ನಾನು ಪದಕ ಗೆಲ್ಲುತ್ತೇನೆ' ಎಂದು ಪ್ರತಿಕ್ರಿಯಿಸುವಾಗ ಮಸಿತಾಕಿದ ಕೈಗಳಲ್ಲಿದ್ದ ಹರೀಶ್ ಕಣ್ಣೊಳಗೊಂದು ಹೊಳಪು ಕಾಣಿಸಿತು!

Story first published: Saturday, September 8, 2018, 1:48 [IST]
Other articles published on Sep 8, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+