For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಶಾಟ್ ಪುಟ್ ನಲ್ಲಿ ತೇಜೀಂದರ್ ಪಾಲ್ ಚಾಂಪಿಯನ್!

Asian Games 2018: Champion Tejinderpal Singh Toor has won a GOLD

ಜಕಾರ್ತಾ, ಆಗಸ್ಟ್ 25: ಇಂಡೋನೇಷ್ಯಾಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೆಟಿಕ್ಸ್ ವಿಭಾಗದಿಂದ ಚಿನ್ನದ ಸಾಧನೆಯಾಗಿದೆ. ಅಥ್ಲೀಟ್ ತೇಜೀಂದರ್ ಪಾಲ್ ಸಿಂಗ್ ತೂರ್ ಅವರು ಶಾಟ್ ಪುಟ್ ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ ಚಿನ್ನ ಬಾಚಿಕೊಂಡಿದ್ದಾರೆ.

ಶನಿವಾರ ನಡೆದ ಪುರುಷರ ಶಾಟ್ ಪುಟ್ ಫೈನಲ್ ನಲ್ಲಿ ತೇಜೀಂದರ್ ಪಾಲ್ ಅವರು ಆರಂಭಿಕ ಪ್ರಯತ್ನದಲ್ಲೇ 19.96 ಮೀ. ದೂರ ಗುಂಡೆಸೆದರು. ಮತ್ತೆ 20.75 ಮೀ. ಸಾಧನೆಯೊಂದಿಗೆ ಬಂಗಾರದೊಂದಿಗೆ ಏಷ್ಯಾನ್ ಗೇಮ್ಸ್ ಹೊಸ ಕೂಟ ದಾಖಲೆ ಬರೆದರು. ಇದು ಚೀನಾದ ಲಿಯು ಯಾಂಗ್ (19.42 ಮೀ.) ಮತ್ತು ಕೊರಿಯಾದ ಇಲ್ ವೂ ಜಂಗ್ (19.15 ಮೀ.) ಸಾಧನೆಯನ್ನು ಸರಿಗಟ್ಟಿತು.

ತೇಜೀಂದರ್ಪಾಲ್ ಎಸೆದಿರುವ ಈ ದೂರ ಏಷ್ಯಾನ್ ಗೇಮ್ಸ್ ನಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕ್ರೀಡಾಕೂಟದ ಏಳನೇ ದಿನ ಭಾರತಕ್ಕೆ ಸ್ಕ್ವ್ಯಾಷ್ ನಲ್ಲಿ 3 ಕಂಚಷ್ಟೇ ಲಭಿಸಿತ್ತು. ಆದರೆ ದಿನದಾಂತ್ಯಕ್ಕೆ ತೇಜೀಂದರ್ ಚಿನ್ನ ಗೆದ್ದು ಭಾರತಕ್ಕೆ ಮತ್ತಷ್ಟು ಹುಮ್ಮಸ್ಸು ತುಂಬಿದ್ದಾರೆ.

Story first published: Saturday, August 25, 2018, 20:35 [IST]
Other articles published on Aug 25, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+