ಏಷ್ಯನ್ ಗೇಮ್ಸ್ ಗೆ ವರ್ಣರಂಜಿತ ತೆರೆ: ದೇಸಿ ತಂಡಕ್ಕೆ ರಾಣಿ ಮುಂದಾಳತ್ವ

ಜಕಾರ್ತಾ, ಸೆಪ್ಟೆಂಬರ್ 2: ಸುಮಾರು 15 ದಿನಗಳ ಕಾಲ ನಾವು (ಕ್ರಿಕೆಟ್ ಗೆ ಹೊರತಾಗಿ) ಕ್ರೀಡಾ ಸ್ಪರ್ಧೆಗಳ ಕಡೆ ಲಕ್ಷ್ಯ ಹರಿಸುವಂತೆ ಮಾಡಿದ್ದ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ಗೆ ಸೆಪ್ಟೆಂಬರ್ 2ರಂದು ತೆರೆಬಿದ್ದಿದೆ. ಮುಕ್ತಾಯ ಸಮಾರಂಭದಲ್ಲಿ ಭಾರತ ತಂಡವನ್ನು ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಧ್ವಜ ಹಿಡಿದು ಮುನ್ನಡೆಸಿದರು.
2018 ರ ಏಷ್ಯನ್ ಗೇಮ್ಸ್ ವರ್ಣ ರಂಜಿತ ಮುಕ್ತಾಯಕ್ಕೆ ಜಕಾರ್ತಾದ ಗೆಲೋರಾ ಬಂಗ್ ಕರ್ನೊ ಸ್ಟೇಡಿಯಂ ಸಾಕ್ಷಿಯಾಯಿತು. ಸುಮಾರು 40 ಬಗೆಯ ವಿವಿಧ ಕ್ರೀಡಾ ಸ್ಪರ್ಧೆಗಳು ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ನಡೆಸಲ್ಪಟ್ಟಿದ್ದವು. ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್ ನ ಶೇಖ್ ಅಹ್ಮದ್ ಅಲ್ ಫಹಾದ್ ಅಲ್ ಸಬಾ ಅವರು '18ನೇ ಏಷ್ಯಾನ್ ಗೇಮ್ಸ್ ಮುಕ್ತಾಯಗೊಂಡಿರುವುದಾಗಿ ನಾನು ಘೋಷಿಸುತ್ತಿದ್ದೇನೆ' ಎನ್ನುವುದರೊಂದಿಗೆ ಆಕರ್ಷಣೀಯ ಕ್ರೀಡಾಕೂಟಕ್ಕೆ ತೆರೆ ಎಳೆದರು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಮುಕ್ತಾಯ ಸಮಾರಂಭದ ಆರಂಭದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಕರನ್ನು ರಂಜಿಸಿದವು. ಇಂಡೋನೇಷ್ಯಾ ಸ್ಟಾರ್ ಸಿಂಗರ್ ಇಂದ್ಹ್ ನೇವರ್ಟರಿ, ನಟ ರೊನಾಲ್ ಸುರಪ್ರದಜಾ, ಚೀನೀ ವ್ಯವಹಾರ ಉದ್ಯಮಿ ಜ್ಯಾಕ್ ಮಾ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಾಡುಗಾರಿಕೆ, ನೃತ್ಯ, ರೂಪಕಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಆಕರ್ಷಕ ದೀಪಾಲಂಕಾರವೂ ವೀಕ್ಷಕರ ಮನಸೂರೆಗೊಳಿಸಿತು. ಈ ವೇಳೆ ಚೀನಾಕ್ಕೆ 2022ರ ಏಷ್ಯಾನ್ ಗೇಮ್ಸ್ ಗೆ ಆತಿಥ್ಯವಹಿಸುವ ಹೊಣೆಗಾರಿಕೆಯನ್ನು ಹಸ್ತಾಂತರಿಸಲಾಯಿತು. ಜೀನಾದ ಹ್ಯಾಂಗ್ಝೌ ನಲ್ಲಿ ಮುಂದಿನ ಏಷ್ಯನ್ ಗೇಮ್ಸ್ ನಡೆಯಲಿದೆ. ಈ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟು 69 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications