ಏಷ್ಯನ್ ಗೇಮ್ಸ್ 2018: ಸ್ಕ್ವ್ಯಾಷ್ ನಲ್ಲಿ ಜೋಶ್ನಾ ಚಿನ್ನಪ್ಪಗೆ ಕಂಚಿನ ಪದಕ

ಜಕಾರ್ತಾ, ಆಗಸ್ಟ್ 25: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯಾನ್ ಗೇಮ್ಸ್ ನ ಸ್ಕ್ವ್ಯಾಷ್ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಜೋಶ್ನಾ ಚಿನ್ನಪ್ಪ ಅವರು ಕಂಚಿಗೆ ತೃಪ್ತಿಪಟ್ಟಿದ್ದಾರೆ. ಸೆಮಿಫೈನಲ್ ನಲ್ಲಿ ಸ್ಪರ್ಧಿಸಿದ್ದ ಚಿನ್ನಪ್ಪಗೆ ಏಷ್ಯನ್ ಗೇಮ್ಸ್ ಫೈನಲ್ ಪ್ರವೇಶಿಸಲು ಬಂಗಾರದ ಅವಕಾಶವಿತ್ತು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಶನಿವಾರ (ಆಗಸ್ಟ್ 25) ನಡೆದ ಸ್ಕ್ವ್ಯಾಷ್ ಮಹಿಳಾ ಸಿಂಗಲ್ಸ್ ನಲ್ಲಿ ಸೆಮಿಫೈನಲ್ಸ್ ನಲ್ಲಿ ಜೋಶ್ನಾ ಅವರು ಮಲೇಷ್ಯನ್ ಸ್ಟಾರ್ ಆಟಗಾರ್ತಿ ಶಿವಂಗಂಗರಿ ಅವರೆದುರು 1-3ರ ಸೋಲು ಕಂಡರು. ಇದರಿಂದ ಜೋಶ್ನಾ ಎಷ್ಯನ್ ಗೇಮ್ಸ್ ಸ್ಕ್ವ್ಯಾಷ್ ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದ ಅವಕಾಶವನ್ನು ಕಳಕೊಂಡರು.
ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಏಳನೇ ದಿನವಾದ ಇಂದು ಮಹಿಳಾ ಸಿಂಗಲ್ಸ್ ನಲ್ಲಿ ಮತ್ತೊನಬ್ಬ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಕೂಡ ಕಂಚು ಜಯಿಸಿದ್ದು, ಭಾರತಕ್ಕೆ ಸ್ಕ್ವ್ಯಾಷ್ ವಿಭಾಗದಿಂದ 2 ಪದಕಗಳು ಸೇರಿಕೊಂಡಂತಾಗಿದೆ. ಭಾರತ ಇಲ್ಲಿಗೆ ಒಟ್ಟು 27 ಪದಕಗಳನ್ನು ಗಳಿಸಿದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications