ಏಷ್ಯನ್ ಗೇಮ್ಸ್ 2018: ರಜತ ಪದಕ ಗೆದ್ದ ದೀಪಕ್ ಕುಮಾರ್

ಜಕಾರ್ತಾ, ಆಗಸ್ಟ್ 20: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ 18 ನೇ ಏಷ್ಯನ್ ಗೇಮ್ಸ್ ನ 10 ಮೀ.ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ದೀಪಕ್ ಕುಮಾರ್ ರಜತ ಪದಕ ಗೆದ್ದಿದ್ದಾರೆ.
247.7 ಅಂಕ ಪಡೆಯುವ ಮೂಲಕ ರಜತ ಪದಕ ಗೆದ್ದ ದೀಪಕ್ ಕುಮಾರ್ ಚಿನ್ನದ ಪದಕವನ್ನು ಕೆಲವೇ ಅಂಕಗಳ ಅಂತರದಿಂದ ಚೀನಾದ ಹಾವೊರೋನ್ ಯಾಂಗ್(249.1 ಅಂಕ) ಅವರಿಗೆ ಬಿಟ್ಟುಕೊಟ್ಟರು.
ಈ ವರ್ಷ ನಡೆದ ಐಎಸ್ಎಸ್ಎಫ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದ 30 ವರ್ಷದ ದೀಪಕ್ ಕುಮಾರ್ ಇದೀಗ ಏಷ್ಯನ್ ಗೇಮ್ಸ್ ನಲ್ಲಿ ರಜತ ಪದಕ ಗಳಿಸುವ ಮೂಲಕ ಭಾರತದ ಪದಕ ಪಟ್ಟಿಗೆ ಮೂರನೇ ಪದಕ ಸೇರ್ಪಡೆಯಾದಂತಾಗಿದೆ.
ಆಗಸ್ಟ್ 19 ರಂದು ನಡೆದ ಪುರುಷರ 65 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಭಾರತದ ಭಜರಂಗ್ ಪೂನಿಯಾ ಚಿನ್ನ ಗೆಲ್ಲುವ ಮೂಲಕ ಚಿನ್ನದ ಪದಕದ ಖಾತೆ ತೆರೆದಿದ್ದರು.
10 ಮೀ.ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ-ರವಿಕುಮಾರ್ ಜೋಡಿ ಕಂಚಿನ ಪದಕ ಗೆದ್ದು, ಭಾರತದ ಪದಕದ ಖಾತೆ ತೆರೆದಿತ್ತು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
Story first published: Monday, August 20, 2018, 11:58 [IST]
Other articles published on Aug 20, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications