
ಜಕಾರ್ತಾ, ಆಗಸ್ಟ್ 25: ಏಷ್ಯಾನ್ ಗೇಮ್ಸ್ ಮಹಿಳಾ ಸಿಂಗಲ್ಸ್ ಸ್ಕ್ವ್ಯಾಷ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಕಂಚು ಜಯಿಸಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ನಲ್ಲಿ ಅವರು ಸೋತಿದ್ದರಿಂದ ಕಂಚಿಗೆ ತೃಪ್ತಿಪಟ್ಟುಕೊಳ್ಳುವಂತಾಯ್ತು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಆಗಸ್ಟ್ 25ರ ಶನಿವಾರ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯಾನ್ ಗೇಮ್ಸ್ ನ 7ನೇ ದಿನ ದೀಪಿಕಾ ಅವರು ಮಹಿಳಾ ಸ್ಕ್ವ್ಯಾಷ್ ಸಿಂಗಲ್ಸ್ ಸೆಮಿಫೈನಲ್ಸ್ ನಲ್ಲಿ ಮಲೇಷ್ಯನ್ ಆಟಗಾರ್ತಿ ನಿಕೋಲ್ ಡೇವಿಡ್ ವಿರುದ್ಧ ಪರಾಭವಗೊಂಡರು.
ದೀಪಿಕಾ ಅವರ ಕಂಚಿನ ಪದಕದೊಂದಿಗೆ ಭಾರತದ ಪದಕ ಪಟ್ಟಿಯಲ್ಲಿ ಒಟ್ಟು 26 ಪದಕಗಳು ಸೇರ್ಪಡೆಗೊಂಡಿದ್ದು, ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಶುಕ್ರವಾರ ನಡೆದ ಪುರಷರ ಟೆನಿಸ್ ಡಬಲ್ಸ್ ಫೈನಲ್ ನಲ್ಲಿ ಭಾರತದ ಬೋಪಣ್ಣ-ಶರಣ್ ಜೋಡಿ ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್-ಡೆನಿಸ್ ಯೆವ್ಸೇವ್ ಜೋಡಿಯನ್ನು 6-3, 6-4ರ ನೇರ ಸೆಟ್ ನಿಂದ ಸೋಲಿಸಿ ಬಂಗಾರದ ನಗೆ ಬೀರಿತ್ತು.