
ಜಕಾರ್ತಾ, ಆಗಸ್ಟ್ 26: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಈಕ್ವೆಸ್ಟ್ರಿಯನ್ ತಂಡಕ್ಕೆ ಬೆಳ್ಳಿಯ ಪದಕ ಲಭಿಸಿದೆ. ಇಲ್ಲಿಗೆ ಭಾರತದ ಪದಕ ಪಟ್ಟಿಯಲ್ಲಿ ಒಟ್ಟು31 ಪದಕಗಳು ಸೇರ್ಪಡೆಯಾಗಿವೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಆಗಸ್ಟ್ 26ರ ಭಾನುವಾರ ನಡೆದ ಪುರುಷರ ಈಕ್ವೆಸ್ಟ್ರಿಯನ್ ತಂಡ ಸ್ಪರ್ಧೆಯಲ್ಲಿ ಭಾರತ ಬೆಳ್ಳಿಯ ಕದಕವನ್ನು ಸಂಭ್ರಮಿಸಿತು. ಮಿರ್ಜಾ ಫೌದ್, ರಾಕೇಶ್ ಕುಮಾರ್, ಆಶೀಷ್ ಮಲಿಕ್ ಮತ್ತು ಜಿತೇಂದರ್ ಸಿಂಗ್ ಅವರನ್ನೊಳಗೊಂಡ ತಂಡಕ್ಕೆ ಬೆಳ್ಳಿ ಲಭಿಸಿತು. ಭಾನುವಾರವೇ ನಡೆದಿದ್ದ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಫೌದ್ ಬೆಳ್ಳಿ ಜಯಿಸಿದ್ದರು.
1982ರ ನಂತರ ಇದೇ ಮೊದಲ ಬಾರಿಗೆ ಭಾರತ ಈಕ್ವೆಸ್ಟ್ರಿಯನ್ ನಲ್ಲಿ ತಂಡ ಪ್ರಶಸ್ತಿ ಗೆದ್ದಿಕೊಂಡಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಹಿಮಾ ದಾಸ್ ಮತ್ತು ನಿರ್ಮಲಾ ಅವರು ಫೈನಲ್ ಗೆ ಪ್ರವೇಶಿದ್ದು, ಅಲ್ಲೂ ಭಾರತಕ್ಕೆ ಪದಕದ ನಿರೀಕ್ಷೆಯಿದೆ.