ಏಷ್ಯನ್ ಗೇಮ್ಸ್ 2018: ಸ್ಕ್ವ್ಯಾಷ್ ನಲ್ಲಿ ಕಂಚು ಗೆದ್ದ ಸೌರವ್ ಘೋಷಾಲ್

ಜಕಾರ್ತಾ, ಆಗಸ್ಟ್ 25: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಸ್ಕ್ವ್ಯಾಷ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಸೌರವ್ ಘೋಷಾಲ್ ಕಂಚು ಗೆದ್ದಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ನಲ್ಲಿ ಸೌರವ್ ಸೋತಿದ್ದರಿಂದ ಭಾರತಕ್ಕೆ ಸ್ಕ್ವ್ಯಾಷ್ ನಲ್ಲಿ ಮತ್ತೊಂದು ಕಂಚು ಲಭಿಸಿತು.
ಸೆಮಿ ಫೈನಲ್ ನಲ್ಲಿ ಘೋಷಾಲ್ ಅವರು ಹಾಂಕಾಂಗ್ ಆಟಗಾರ ಔ ಚುನ್ ಮಿಂಗ್ ಲಿಯೋ ಅವರೆದುರು 2-3ರ ಅಂತರದಿಂದ ಸೋಲನುಭವಿಸಿದರು. ಶನಿವಾರ ಸ್ಕ್ವ್ಯಾಷ್ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಎರಡರಲ್ಲೂ ಭಾರತಕ್ಕೆ ಕಂಚಿನ ಪದಕ ದೊರೆತಿವೆ.
ಈ ಮೊದಲು ನಡೆದ ಮಹಿಳಾ ಸಿಂಗಲ್ಸ್ ಬೇರೆ ಬೇರೆ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಪಳ್ಳಿಕಲ್ ಮತ್ತು ಜೋಶ್ನಾ ಚಿನ್ನಪ್ಪ ಅವರೂ ಕಂಚು ಜಯಿಸಿದ್ದರು. ಸೌರವ್ ಪದಕ ಸೇರಿಸಿದರೆ ಭಾರತದ ಖಾತೆಯಲ್ಲಿ ಒಟ್ಟು 28 ಪದಕಗಳಾಗಿವೆ.
Story first published: Saturday, August 25, 2018, 17:30 [IST]
Other articles published on Aug 25, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications