ಏಷ್ಯನ್ ಗೇಮ್ಸ್ : ಫೈನಲ್ ಗೂ ಮುನ್ನವೇ ದೀಪಾಗೆ ಪದಕ ಮಿಸ್

ಜಕಾರ್ತ, ಆಗಸ್ಟ್ 22: ಭಾರತದ ಹೆಮ್ಮೆಯ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಬುಧವಾರ (ಆಗಸ್ಟ್ 22) ದಂದು ಅವರು ಆರ್ಟಿಸ್ಟಿಕ್ ಫೈನಲ್ಸ್ ನಿಂದ ಹೊರಗುಳಿದಿದ್ದಾರೆ. ಬಹುಕಾಲದಿಂದ ಕಾಡುತ್ತಿರುವ ಮೊಣಕಾಲಿನ ನೋವಿನಿಂದ ಫೈನಲ್ಸ್ ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಈ ಮೂಲಕ ಖಚಿತವಾಗಿದ್ದ ಒಂದು ಪದಕ ಭಾರತಕ್ಕೆ ಮಿಸ್ ಆಗಲಿದೆ.
ಬ್ಯಾಲೆನ್ಸಿಂಗ್ ಬೀಮ್ಸ್ ಫೈನಲ್ ಪಂದ್ಯಕ್ಕೆ ತಯಾರಿ ನಡೆಸಲು ಸೂಚಿಸಲಾಗಿದ್ದು, ದೀಪಾ ಅವರ ಗಾಯದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೋಚ್ ಬಿಸ್ವೇಸ್ವರ್ ನಂದಿ ಅವರು ಪಿಟಿಐಗೆ ತಿಳಿಸಿದರು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಪೋಡಿಯಂ ತರಬೇತಿ ಮೇಲೆ ಸ್ವಲ್ಪ ಜರ್ಕ್ ಆಗಿದ್ದರಿಂದ ತರಬೇತಿ ಅರ್ಧಕ್ಕೆ ನಿಲ್ಲಿಸಬೇಕಾಯಿತು, ಕೋಚ್ ಗಳ ನಿರ್ಧಾರದಂತೆ ಟೀಂ ಸ್ಪರ್ಧೆಯಿಂದ ಹೊರಗುಳಿಯಬೇಕಾಗಿದೆ ಎಂದು ದೀಪಾ ಹೇಳಿದ್ದಾರೆ.
2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸ್ವಲ್ಪದರಲ್ಲಿ ಕಂಚನ್ನು ಕಳೆದುಕೊಂಡಿದ್ದ ದೀಪಾ, ದೀಪಾ ಕರ್ಮಾಕರ್ ಅವರು ಮಂಗಳವಾರ ನಡೆದ ಜಿಮ್ನಾಸ್ಟಿಕ್ ವಾಲ್ಟ್ ವಿಭಾಗದಲ್ಲಿ ಫೈನಲ್ ಪ್ರವೇಶಿಸುವಲ್ಲಿ ಎಡವಿದರು. ನೆಚ್ಚಿನ ವಾಲ್ಟ್ ವಿಭಾಗದಲ್ಲಿ 13.225 ಅಂಕಗಳನ್ನಷ್ಟೇ ಗಳಿಸಿ ಫೈನಲ್ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ದೀಪಾ 8ನೇ ಸ್ಥಾನಿಗರಾಗಿ ಇದರಲ್ಲಿ ಸ್ಪರ್ಧೆ ಮುಗಿಸಿದರು.
ಟರ್ಕಿಯಲ್ಲಿ ನಡೆದ ವಿಶ್ವ ಚಾಲೆಂಜ್ ಕಪ್ ನಲ್ಲಿ ಚಿನ್ನದ ಪದಕ(ವಾಲ್ಟ್) ಗೆದ್ದಿರುವ ದೀಪಾ ಅವರು ಎಸಿಎಲ್ ಸರ್ಜರಿಗೆ ಒಳಪಟ್ಟಿದ್ದಾರೆ. ಹೀಗಾಗಿ, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲೂ ಪಾಲ್ಗೊಂಡಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications