ಏಷ್ಯನ್ ಗೇಮ್ಸ್ 2018: ಸೇಲಿಂಗ್ ಮಿಶ್ರ ಓಪನ್ ನಲ್ಲಿ ಹರ್ಷಿತಾಗೆ ಕಂಚು

ಜಕಾರ್ತಾ, ಆಗಸ್ಟ್ 31: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸೇಲಿಂಗ್ (ನೌಕಾಯಾನ) ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಸೇರ್ಪಡೆಯಾಗಿದೆ. ಸೇಲಿಂಗ್ ಮಿಶ್ರ ಓಪನ್ ನಲ್ಲಿ ಭಾರತದ ಹರ್ಷಿತಾ ತೋಮರ್ ಕಂಚಿನ ಪದಕ ಗೆದ್ದಿದ್ದಾರೆ.
ಅಗಸ್ಟ್ 31ರ ಶುಕ್ರವಾರ ನಡೆದ ಸೇಲಿಂಗ್ ಮಿಶ್ರ ಓಪನ್ ಲೇಸರ್ 4.7 ವಿಭಾಗದಲ್ಲಿ 16ರ ಹರೆಯದ ಹರ್ಷಿತಾ ಕಂಚು ತನ್ನದಾಗಿಸಿಕೊಂಡರು. ಹರ್ಷಿತಾ ಭಾರತಕ್ಕೆ ಗೆದ್ದಿದ್ದು ಇದು 61ನೇ ಪದಕ. ಭಾರತದ ಪದಕ ಪಟ್ಟಿಯಲ್ಲೀಗ 62 ಪದಕಗಳಿದ್ದು, ಭಾರತ 8ನೇ ಸ್ಥಾನದಲ್ಲಿದೆ.
ಶುಕ್ರವಾರವೇ ನಡೆದ ಮಹಿಳಾ ವಿಭಾಗದ ಸೇಲಿಂಗ್ ನಲ್ಲಿ ವರ್ಷಾ ಮತ್ತು ಶ್ವೇತಾ ಬೆಳ್ಳಿಯ ಜೋಡಿ ಬೆಳ್ಳಿ ಪದಕ ಜಯಿಸಿತು. ಈ ಜೋಡಿ 40 ನೆಟ್ ಪಾಯಿಂಟ್ ಗಳೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟಿತು. ಇಂಚಿಯಾನ್ ಗೇಮ್ಸ್ ಗೆ ಹೋಲಿಸಿದರೆ ಈ ಬಾರಿಯ ಇಂಡೋನೇಷ್ಯಾ ಗೇಮ್ಸ್ ನಲ್ಲಿ ಭಾರತದ ಪದಕ ಪಟ್ಟಿ ಬೆಳೆದಿದೆ. ಕಳೆದ ಏಷ್ಯನ್ ನಲ್ಲಿ ಭಾರತಕ್ಕೆ 57 ಪದಕಗಳು ಲಭಿಸಿದ್ದವು.
Story first published: Friday, August 31, 2018, 15:44 [IST]
Other articles published on Aug 31, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications