ಏಷ್ಯನ್ ಗೇಮ್ಸ್: ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಪದಕ ಖಚಿತ

ಜಕಾರ್ತಾ, ಆಗಸ್ಟ್ 25: ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಬ್ರಿಡ್ಜ್ ಸ್ಪರ್ಧೆಯಲ್ಲಿ ಇದೇ ಮೊದಲಬಾರಿಗೆ ಭಾರತದ ಪುರುಷರ ತಂಡ ಮತ್ತು ಮಿಶ್ರ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಹೀಗಾಗಿ ಪದಕಪಟ್ಟಿಯಲ್ಲಿ ಈವರೆಗೆ ಗಮನಾರ್ಹ ಪದಕಗಳನ್ನು ಗೆದ್ದಿರುವ ಭಾರತಕ್ಕೆ ಇನ್ನರಡು ಪದಕಗಳು ಖಾತ್ರಿಯಾಗಿವೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಶನಿವಾರ (ಆಗಸ್ಟ್ 25)ನಡೆದ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡ ಮತ್ತು ಮಿಶ್ರ ತಂಡ ಎರಡೂ ಸೆಮಿಫೈನಲ್ ಪ್ರವೇಶಿಸಿತು. ಅರ್ಹತಾ ಸುತ್ತಿನಲ್ಲಿ ಪುರುಷರ ಬ್ರಿಡ್ಜ್ ತಂಡ ನಾಲ್ಕನೇ ಸ್ಥಾನ ಪಡೆದರೆ ಮಿಶ್ರ ತಂಡ ದ್ವಿತೀಯ ಸ್ಥಾನ ಗಳಿಸಿತು.
ಒಟ್ಟು 13 ಅರ್ಹತಾ ಸುತ್ತಿನ ಸ್ಪರ್ಧೆಯ ಬಳಿಕ ಪುರುಷರ ತಂಡ ನಾಲ್ಕನೇ ಸ್ಥಾನಗಳಿಸಿತು. ಇತ್ತ ಮಿಶ್ರ ತಂಡ ಏಳು ಅರ್ಹತಾ ಸ್ಪರ್ಧೆಯ ಬಳಿಕ ಅಗ್ರ ಸ್ಥಾನ ಗಳಿಸಿತು. ಕ್ರೀಡಾಕೂಟದ ಏಳನೇ ದಿನ ಭಾರತಕ್ಕೆ ಸ್ಕ್ವ್ಯಾಷ್ ನಲ್ಲಿ 3 ಕಂಚಷ್ಟೇ ಲಭಿಸಿತ್ತು. ಆದರೆ ದಿನದಾಂತ್ಯಕ್ಕೆ ತೇಜೀಂದರ್ ಚಿನ್ನ ಗೆದ್ದು ಭಾರತಕ್ಕೆ ಮತ್ತಷ್ಟು ಹುಮ್ಮಸ್ಸು ತುಂಬಿದ್ದಾರೆ.
Story first published: Saturday, August 25, 2018, 20:54 [IST]
Other articles published on Aug 25, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications