ಏಷ್ಯನ್ ಗೇಮ್ಸ್ 2018: ಸೇಲಿಂಗ್ ನಲ್ಲಿ ವರ್ಷಾ-ಶ್ವೇತಾ ಜೋಡಿಗೆ ಬೆಳ್ಳಿ

ಜಕಾರ್ತಾ, ಆಗಸ್ಟ್ 31: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸೇಲಿಂಗ್ (ನೌಕಾಯಾನ) ವಿಭಾಗದಲ್ಲಿ ಭಾರತದ ಮಹಿಳೆಯರಿಗೆ ಬೆಳ್ಳಿ ಪದಕ ಲಭಿಸಿದೆ. ವರ್ಷಾ ಗೌತಮ್ ಮತ್ತು ಶ್ವೇತಾ ಶೇರ್ವಗರ್ ಬೆಳ್ಳಿಯ ಪದಕ ಜಯಿಸಿದ್ದಾರೆ.
ಅಗಸ್ಟ್ 31ರ ಶುಕ್ರವಾರ ನಡೆದ ಮಹಿಳಾ ವಿಭಾಗದ ಸೇಲಿಂಗ್ ನಲ್ಲಿ ವರ್ಷಾ ಮತ್ತು ಶ್ವೇತಾ ಜೋಡಿ ಬೆಳ್ಳಿಯ ಪದಕ ಜಯಿಸಿತು. ಈ ಜೋಡಿ 40 ನೆಟ್ ಪಾಯಿಂಟ್ ಗಳೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟಿತು.
ಆಗಸ್ಟ್ 30ರ ದಿನದಾಂತ್ಯಕ್ಕೆ ಸ್ಟಾರ್ ಓಟಗಾರ್ತಿ ಹಿಮಾ ದಾಸ್, ಕನ್ನಡತಿ ಎಂಆರ್ ಪೂವಮ್ಮ, ಸರಿತಾ ಬೆನ್ ಗಾಯಕ್ವಾಡ್, ವಿಸ್ಮಯ ಅವರನ್ನೊಳಗೊಂಡ ತಂಡ ಮಹಿಳಾ ವಿಭಾಗದ 4x400 ಮೀ. ರಿಲೇ ಓಟದಲ್ಲಿ ಬಂಗಾರ ತನ್ನದಾಗಿಸಿಕೊಂಡಿತು. ಭಾರತ ತಂಡ 3:28.72 ಸೆಕೆಂಡ್ ಗಳಲ್ಲಿ 400ರ ನಾಲ್ಕು ಸುತ್ತನ್ನು ಮುಗಿಸಿತ್ತು.
Story first published: Friday, August 31, 2018, 15:20 [IST]
Other articles published on Aug 31, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications