ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2018: ಭಾರತದ ಬಂಗಾರದ ಮಾಲೆ ಬೆಸೆದವರು

Asian Games 2018: Indias gold tally in the 18th Asian Games

ಜಕಾರ್ತಾ, ಆಗಸ್ಟ್ 31: ಇಂಡೋನೇಷ್ಯಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಅಪೂರ್ವ ಸಾಧನೆ ಮೆರೆಯಿತು. 2014ರಲ್ಲಿ ಸೌತ್ ಕೊರಿಯಾದ ಇಂಚಿಯಾನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ಗಿಂತ ಇಂಡೋನೇಷ್ಯದಲ್ಲಿ ಭಾರತದ ಪದಕ ಪಟ್ಟಿ ಬೆಳೆದಿತ್ತು.

ಏಷ್ಯನ್ ಗೇಮ್ಸ್: ಮಹಿಳಾ 4x400 ಮೀ. ರಿಲೇಯಲ್ಲಿ ಭಾರತಕ್ಕೆ ಬಂಗಾರಏಷ್ಯನ್ ಗೇಮ್ಸ್: ಮಹಿಳಾ 4x400 ಮೀ. ರಿಲೇಯಲ್ಲಿ ಭಾರತಕ್ಕೆ ಬಂಗಾರ

ಇಂಚಿಯಾನ್ ಗೇಮ್ಸ್ ನಲ್ಲಿ ಭಾರತ 11 ಚಿನ್ನ, 10 ಬೆಳ್ಳಿ ಮತ್ತು 36 ಕಂಚಿನ ಪದಕಗಳೊಂದಿಗೆ ಒಟ್ಟು 57 ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತ್ತು. ಹೀಗಾಗಿ ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಈ ಸಾರಿ ಭಾರತಕ್ಕೆ ಹೆಚ್ಚೇ ಪದಕಗಳು ದೊರೆತಿವೆ.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

2018ರ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಐತಿಹಾಸಿಕ ಸಾಧನೆಗಳಿಗೆ ಗುರುತಿಸಿಕೊಂಡಿದ್ದು ಮತ್ತೊಂದು ವಿಶೇಷ. ಶಾಟ್ ಪುಟ್ ನಲ್ಲಿ ಭಾರತದ ತೇಜೀಂದರ್ ಪಾಲ್ ಸಿಂಗ್ ಬಂಗಾರದೊಂದಿಗೆ ಏಷ್ಯನ್ ಗೇಮ್ಸ್ ಹೊಸ ದಾಖಲೆ ಬರೆದರು. 36 ವರ್ಷಗಳ ಬಳಿಕ ಬ್ಯಾಡ್ಮಿಂಟನ್ ನಲ್ಲಿ ವೈಯಕ್ತಿಕ ಪದಕಗಳು (ಬೆಳ್ಳಿ-ಸಿಂದು, ಕಂಚು-ಸೈನಾ) ಲಭಿಸಿದ್ದವು.

ಅಥ್ಲೆಟಿಕ್ಸ್ ನಲ್ಲಿ ಭಾರತ ಈ ಸಾರಿ ಅತೀ ಹೆಚ್ಚು ಮತ್ತು ದಾಖಲೆಗಳೊಂದಿಗೆ ಪದಕ ಗೆದ್ದಿದ್ದೂ ಅವಿಸ್ಮರಣೀಯವೆನಿಸಿತು. ಇಂಡೋನೇಷ್ಯಾ ಗೇಮ್ಸ್ ನಲ್ಲಿ ಭಾರತ ಬಂಗಾರದೊಂದಿಗೆ ಮಿನುಗಲು ಕಾರಣರಾದ ಎಲ್ಲಾ ದೇಸಿ ಹೆಮ್ಮೆಗಳ ಚುಟುಕು ಮಾಹಿತಿ ಇಲ್ಲಿದೆ..

1. ಬಜರಂಗ್ ಪೂನಿಯಾ

1. ಬಜರಂಗ್ ಪೂನಿಯಾ

ಕುಸ್ತಿಪಟು ಬಜರಂಗ್ ಪೂನಿಯಾ ಅವರು ಭಾರತ ಪರ ಮೊದಲ ಚಿನ್ನ ಗೆದ್ದಿದ್ದರು. ಪುರುಷರ 65 ಕೆಜಿ ಕುಸ್ತಿ ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಜರಂಗ್ ಚೀನಾದ ತಕಾತನಿ ಡೈಚಿ ಅವರನ್ನು ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದರು.

2. ವಿನೇಶ್ ಫೋಗಟ್

2. ವಿನೇಶ್ ಫೋಗಟ್

ಏಷ್ಯನ್ ಗೇಮ್ಸ್ ಮಹಿಳಾ 50 ಕೆಜಿ ಕುಸ್ತಿ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ವಿನೇಶ್ ಫೋಗಟ್ ಭಾರತಕ್ಕೆ ಚಿನ್ನ ಗೆದ್ದಿದ್ದರು. ಜಪಾನ್ ಕುಸ್ತಿಪಟು ಸನ್ ಯಾನನ್ ಎದುರು ವಿನೇಶ್ ಚಿನ್ನ ಗೆಲ್ಲುವ ಮೂಲಕ ಭಾರತ ಪರ ಏಷ್ಯನ್ ಗೇಮ್ಸ್ ರಸ್ಲಿಂಗ್ ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದರು.

3. ಸೌರಭ್ ಚೌಧರಿ

3. ಸೌರಭ್ ಚೌಧರಿ

10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಚಿನ್ನ ಗೆದ್ದಿದ್ದರು. 16ರ ಹರೆಯದ ಸೌರಭ್ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪರ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದರು. ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೌರಭ್ 16ರ ಹರೆಯದವರು.

4. ರಾಹಿ ಸರ್ನೊಬಾತ್

4. ರಾಹಿ ಸರ್ನೊಬಾತ್

ಆಗಸ್ಟ್ 22ರ ಬುಧವಾರ ರಾಹಿ ಸರ್ನೊಬಾತ್ ಅವರು ಮಹಿಳಾ ವಿಭಾಗದ ಶೂಟಿಂಗ್ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ 4ನೇ ಚಿನ್ನದ ಕೊಡುಗೆ ನೀಡಿದ್ದರು. ಇದರೊಂದಿಗೆ ರಾಹಿ ಅವರು ಏಷ್ಯನ್ ಗೇಮ್ಸ್ ನ ಶೂಟಿಂಗ್ ನಲ್ಲಿ ಬಂಗಾರ ಗೆದ್ದ ಭಾರತದ ಮೊದಲ ಮಹಿಳೆಯಾಗಿಯೂ ಇತಿಹಾಸ ನಿರ್ಮಿಸಿದ್ದರು.

5. ಪುರುಷರ ಕ್ವಾಡ್ರಪಲ್ ತಂಡ

5. ಪುರುಷರ ಕ್ವಾಡ್ರಪಲ್ ತಂಡ

18ನೇ ಏಷ್ಯನ್ ಗೇಮ್ಸ್ ನ ಆರನೇ ದಿನ ಆಗಸ್ಟ್ 24ರಂದು ಭಾರತದ ಪುರುಷರ ಕ್ವಾಡ್ರಪಲ್ (4 ಜನರ ತಂಡ) ತಂಡ ಸ್ಕಲ್ಸ್ ರಾವಿಂಗ್ ನಲ್ಲಿ ಚಿನ್ನದ ಪದಕ ಪಡೆಯಿತು. ರಾವಿಂಗ್ ನಲ್ಲಿ ಭಾರತ ಚಿನ್ನದೊಂದಿಗೆ ಮಿನುಗಿದ ಸಾಧನೆಗೆ ಭಾರತ ತಂಡ ಪಾತ್ರವಾಗಿತ್ತು. ಸವಾರನ್ ಸಿಂಗ್, ದತ್ತ ಭೊಕನಾಲ್, ಓಪ್ರಕಾಶ್ ಮತ್ತು ಸುಖ್ಮೀತ್ ಚಿನ್ನಕ್ಕೆ ಪಾಲುದಾರರು.

6. ತೇಜೀಂದರ್ ಪಾಲ್ ಸಿಂಗ್

6. ತೇಜೀಂದರ್ ಪಾಲ್ ಸಿಂಗ್

ಪುರುಷರ ಶಾಟ್ ಪುಟ್ ಫೈನಲ್ ನಲ್ಲಿ ತೇಜೀಂದರ್ ಪಾಲ್ ಸಿಂಗ್ ಅವರು ಆರಂಭಿಕ ಪ್ರಯತ್ನದಲ್ಲೇ 19.96 ಮೀ. ದೂರ ಗುಂಡೆಸೆದರು. ಮತ್ತೆ 20.75 ಮೀ. ಸಾಧನೆಯೊಂದಿಗೆ ಬಂಗಾರ ಗೆದ್ದು ಏಷ್ಯಾನ್ ಗೇಮ್ಸ್ ಹೊಸ ಕೂಟ ದಾಖಲೆ ಬರೆದರು.

7. ಬೋಪಣ್ಣ-ಶರಣ್ ಜೋಡಿ

7. ಬೋಪಣ್ಣ-ಶರಣ್ ಜೋಡಿ

ಪುರಷರ ಟೆನಿಸ್ ಡಬಲ್ಸ್ ಫೈನಲ್ ನಲ್ಲಿ ಭಾರತದ ಬೋಪಣ್ಣ-ಶರಣ್ ಜೋಡಿ ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್-ಡೆನಿಸ್ ಯೆವ್ಸೇವ್ ಜೋಡಿಯನ್ನು 6-3, 6-4ರ ನೇರ ಸೆಟ್ ನಿಂದ ಸೋಲಿಸಿ ಬಂಗಾರದ ನಗೆ ಬೀರಿತ್ತು. ಇದು ಈ ಜೋಡಿಗೆ ಲಭಿಸಿದ ಏಷ್ಯನ್ ಗೇಮ್ಸ್ ಮೊದಲ ಬಂಗಾರ.

8. ನೀರಜ್ ಚೋಪ್ರಾ

8. ನೀರಜ್ ಚೋಪ್ರಾ

ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ದಾಖಲೆಯೊಂದಿಗೆ ಚಿನ್ನ ಬಾಚಿಕೊಂಡರು. ನೀರಜ್ ಸ್ಪರ್ಧೆಯೊಂದರಲ್ಲಿ ಪಾಲ್ಗೊಳ್ಳುತ್ತಿದ್ದರೆ ಅಲ್ಲಿ ಪದಕ ಗ್ಯಾರಂಟಿ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಏಷ್ಯನ್ ಗೇಮ್ಸ್ ಜಾವೆಲಿನ್ ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲಿಗ ಹಿರಿಮೆಗೂ ನೀರಜ್ ಪಾತ್ರರಾಗಿದ್ದರು.

9. ಮನ್ಜೀತ್ ಸಿಂಗ್

9. ಮನ್ಜೀತ್ ಸಿಂಗ್

ಪುರುಷರ 800 ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಮನ್ಜೀತ್ ಸಿಂಗ್ ಗೆ ಬಂಗಾರ ಒಲಿದರೆ, ಜಿನ್ಸನ್ ಜಾನ್ಸನ್ ಗೆ ಬೆಳ್ಳಿಯ ಪದಕ ದೊರೆತ್ತಿತ್ತು. 1:46:15 ಸೆಕೆಂಡ್ ಗಳಲ್ಲಿ 800 ಮೀಟರ್ ಗುರಿ ಮುಟ್ಟಿದ್ದ ಮನ್ಜೀತ್ ಅವರಿಗೆ ಚಿನ್ನದ ಸಂಭ್ರಮ ಲಭಿಸಿತ್ತು.

10. ಅರ್ಪೀಂದರ್ ಸಿಂಗ್

10. ಅರ್ಪೀಂದರ್ ಸಿಂಗ್

ಪುರುಷರ ತ್ರಿವಿಧ ಜಿಗಿತ ಫೈನಲ್ ಸ್ಪರ್ಧೆಯಲ್ಲಿ ಅರ್ಪೀಂದರ್ ಸಿಂಗ್ ಗೆ 16.77 ಮೀ. ದೂರ ಜಿಗಿದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ ನ ತ್ರಿವಿಧ ಜಿಗಿತದಲ್ಲಿ ಭಾರತ ಚಿನ್ನ ಗೆದ್ದ ಅಪರೂಪದ ಸಾಧನೆಯಿದು. 48 ವರ್ಷಗಳ ಬಳಿಕ ಟ್ರಿಪಲ್ ಜಂಪ್ ನಲ್ಲಿ ಭಾರತಕ್ಕೆ ಏಷ್ಯಾನ್ ಬಂಗಾರ ಲಭಿಸಿತ್ತು.

11. ಸ್ವಪ್ನಾ ಬರ್ಮನ್

11. ಸ್ವಪ್ನಾ ಬರ್ಮನ್

ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಭಾರತದ ಸ್ವಪ್ನಾ ಬರ್ಮನ್ ಒಟ್ಟು 6024 ಪಾಯಿಂಟ್ ಗಳನ್ನು ಸಂಪಾದಿಸುವುದರೊಂದಿಗೆ ಚಿನ್ನದ ನಗು ಬೀರಿದ್ದರು. ಹೆಪ್ಟಾಥ್ಲಾನ್ ಎಂದರೆ ಏಳು ಬಗೆಯ ವಿವಿಧ ಈವೆಂಟ್ ಗಳನ್ನೊಳಗೊಂಡ ಕ್ಲಿಷ್ಟಕರ ಸ್ಪರ್ಧೆ.

12. ಜಿನ್ಸನ್ ಜಾನ್ಸನ್

12. ಜಿನ್ಸನ್ ಜಾನ್ಸನ್

ಪುರುಷರ 1500 ಮೀಟರ್ ಓಟದಲ್ಲಿ ಭಾರತದ ಜಿನ್ಸನ್ ಜಾನ್ಸನ್ ಬಂಗಾರ ಗೆದ್ದಿದ್ದರು. 3:44.72 ಸೆಕೆಂಡ್ ಗಳಲ್ಲಿ ಜಿನ್ಸನ್ ಬಂಗಾರಕ್ಕೆ ಮುತ್ತಿಕ್ಕಿದ್ದರು. ಇದೇ ವಿಭಾಗದಲ್ಲಿ 800 ಮೀ. ಓಟದ ಚಿನ್ನ ವಿಜೇತ ಮನ್ಜೀತ್ ನಾಲ್ಕನೇ ಸ್ಥಾನಿಗರಾಗಿದ್ದರು.

13. ಮಹಿಳಾ ವಿಭಾಗದ 4x400 ಮೀ. ರಿಲೇ

13. ಮಹಿಳಾ ವಿಭಾಗದ 4x400 ಮೀ. ರಿಲೇ

ಸ್ಟಾರ್ ಓಟಗಾರ್ತಿ ಹಿಮಾ ದಾಸ್, ಕನ್ನಡತಿ ಎಂಆರ್ ಪೂವಮ್ಮ, ಸರಿತಾ ಬೆನ್ ಗಾಯಕ್ವಾಡ್, ವಿಸ್ಮಯ ಅವರನ್ನೊಳಗೊಂಡ ತಂಡ ಮಹಿಳಾ ವಿಭಾಗದ 4x400 ಮೀ. ರಿಲೇ ಓಟದಲ್ಲಿ ಬಂಗಾರ ತನ್ನದಾಗಿಸಿಕೊಂಡಿತು. ಭಾರತ ತಂಡ 3:28.72 ಸೆಕೆಂಡ್ ಗಳಲ್ಲಿ 400ರ ನಾಲ್ಕು ಸುತ್ತನ್ನು ಮುಗಿಸಿತ್ತು.

14. ಅಮಿತ್ ಪಂಘಲ್

14. ಅಮಿತ್ ಪಂಘಲ್

ಬಾಕ್ಸರ್‌ ಅಮಿತ್ ಪಂಘಲ್ ಅವರು ಈ ಬಾರಿಯ ಏಷ್ಯನ್ ಗೇಮ್ಸ್ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಪುರುಷರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ದುಸ್ಮಾಟೋವ್ ಅವರನ್ನು ಸೋಲಿಸಿ ಬಂಗಾರಕ್ಕೆ ಕೊರಳೊಡ್ಡಿದರು. ಇನ್ನೊಬ್ಬ ಬಾಕ್ಸರ್ ವಿಕಾಸ್ ಕೃಷ್ಣನ್ ಸೆಮಿಫೈನಲ್ ನಲ್ಲಿ ಮೆಡಿಕಲಿ ಅನ್ ಫಿಟ್ ಅನ್ನಿಸಿ ಕಂಚಿನೊಂದಿಗೆ ಪಂದ್ಯದಿಂದ ಹೊರ ನಡೆದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

15. ಪ್ರಣಬ್- ಶಿಬ್ನಾತ್ ಜೋಡಿ

15. ಪ್ರಣಬ್- ಶಿಬ್ನಾತ್ ಜೋಡಿ

ಸೆಪ್ಟಂಬರ್ 1ರ ಶನಿವಾರ ನಡೆದ ಬ್ರಿಡ್ಜ್‌ ಸ್ಪರ್ಧೆಯಲ್ಲಿ ಭಾರತದ ಪ್ರಣಬ್ ಬರ್ಧನ್ ಮತ್ತು ಶಿಬ್ನಾತ್ ದೈಶೇಖರ್ ಜೋಡಿ ಚಿನ್ನ ಜಯಿಸಿತ್ತು. ಬ್ರಿಡ್ಜ್‌ ಇದೊಂದು ಇಸ್ಪೀಟ್ ರೀತಿಯ ಟ್ರಿಕ್ಕಿ ಗೇಮ್. 52 ಇಸ್ಪೀಟ್ ಕಾರ್ಡ್ ಗಳನ್ನು ಬಳಸಿ ಆಡುತ್ತಾರೆ. ಆಟದ ಮೂಲ ಮಾದರಿಯಲ್ಲಿ ಇಬ್ಬಿಬ್ಬರು ಜೋಡಿಯಂತೆ ಒಟ್ಟು ನಾಲ್ಕು ಮಂದಿ ಈ ಆಟವನ್ನು ಆಡುತ್ತಾರೆ. ಪಾರ್ಟ್ನರ್ ಗಳು ಪರಸ್ಪರ ಎದುರುಬದುರಾಗಿ ಕೂತಿರುತ್ತಾರೆ.

Story first published: Saturday, September 1, 2018, 17:02 [IST]
Other articles published on Sep 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X