
ಜಕಾರ್ತಾ, ಆಗಸ್ಟ್ 24: ಭಾರತದ ಪುರುಷರ ಕಬಡ್ಡಿ ತಂಡ ಏಷ್ಯಾನ್ ಗೇಮ್ಸ್ ನಲ್ಲಿ ಇರಾನ್ ವಿರುದ್ಧ ಸೋತ ಬಳಿಕ ಮಹಿಳಾ ಕಬಡ್ಡಿ ತಂಡವೂ ಇರಾನ್ ಎದುರು ಅಘಾತವನ್ನನುಭವಿಸಿದೆ. ಮಹಿಳಾ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತ ಇರಾನ್ ಎದುರು ಸೋಲನುಭವಿಸಿದೆ.
ಶುಕ್ರವಾರ ನಡೆದ ಏಷ್ಯನ್ ಗೇಮ್ಸ್ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳೆಯರು ಇರಾನ್ ವಿರುದ್ಧ 27-24 ಅಂತರದ ಸೋಲನುಭವಿಸಿದರು. ಹೀಗಾಗಿ ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆಯಾಗಿದೆ. ಪುರುಷರ ಕಬಡ್ಡಿ ತಂಡ ಬಹಳ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸೆಮಿಫೈನಲ್ ನಲ್ಲಿ ಸೋತಿತ್ತು.
ಶುಕ್ರವಾರ ನಡೆದ ಮಹಿಳಾ ವಿಭಾಗದ ಶೂಟಿಂಗ್ 10ಮೀ. ಏರ್ ಪಿಸ್ತೂಲ್ ನಲ್ಲಿ ಹೀನಾ ಸಿಧು ಕಂಚಿನ ಪದಕ ತನ್ನದಾಗಿಸಿಕೊಂಡರು. ಹೀನಾ ಅವರು ಒಟ್ಟು 219.2 ಅಂಕಗಳನ್ನು ಪಡೆಯುವುದರೊಂದಿಗೆ ಕಂಚು ಗೆದ್ದರು. ಭಾರತದ ಪದಕ ಪಟ್ಟಿಯಲ್ಲೀಗ 24 ಪದಕಗಳು ಸೇರಿಕೊಂಡಿವೆ.