
ಜಕಾರ್ತಾ, ಆಗಸ್ಟ್ 31: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪುರುಷರ ಸ್ಕ್ವ್ಯಾಷ್ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಭಾರತದ ಪಾಲಾಗಿದೆ. ಶುಕ್ರವಾರ (ಆಗಸ್ಟ್ 31) ನಡೆದ ಸೆಮಿಫೈನಲ್ ನಲ್ಲಿ ಭಾರತ ಹಾಂಕಾಂಗ್ ಎದುರು ಸೋತಿದ್ದರಿಂದ ಕಂಚು ದಕ್ಕಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಸೌತ್ ಕೊರಿಯಾದಲ್ಲಿ ನಡೆದಿದ್ದ 2014ರ ಇಂಚಿಯಾನ್ ಗೇಮ್ಸ್ ನ ಪುರುಷರ ಸ್ಕ್ವ್ಯಾಷ್ ತಂಡ ಸ್ಪರ್ಧೆಯಲ್ಲಿ ಭಾರತ ಬಂಗಾರ ಪದಕವನ್ನು ಗೆದ್ದಿತ್ತು. ಆದರೆ ಈ ಸಾರಿ ಸೆಮಿಫೈನಲ್ ನಲ್ಲೇ ಹಾಂಕಾಂಗ್ ಎದುರು ಭಾರತ 0-2ರ ಸೋಲನುಭವಿಸುವುದರೊಂದಿಗೆ ಕಂಚಿಗೆ ತೃಪ್ತಿಪಟ್ಟಿದೆ. ತಂಡದಲ್ಲಿ ಸೌರವ್ ಘೋಷಾಲ್ ಮತ್ತು ಪಾಲ್ ಸಂಧು ಪಾಲ್ಗೊಂಡಿದ್ದರು.
ಮಹಿಳಾ ವಿಭಾಗದ ಸ್ಕ್ವ್ಯಾಷ್ ತಂಡ ಸ್ಪರ್ಧೆಯಲ್ಲಿ ಭಾರತ ಫೈನಲ್ ಪ್ರವೇಶಿಸಿದ್ದು, ಬೆಳ್ಳಿಯಂತೂ ಖಚಿತವಾಗಿದೆ. ಏಷ್ಯನ್ ಗೇಮ್ಸ್ ಮಹಿಳಾ ಸಿಂಗಲ್ಸ್ ನಲ್ಲಿ ಭಾರತ ಸ್ಟಾರ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಕಂಚಿನ ಪದಕ ಜಯಿಸಿದ್ದರು.