ಏಷ್ಯನ್ ಗೇಮ್ಸ್: ಟೇಬಲ್ ಟೆನ್ನಿಸ್‌ನಲ್ಲಿ ಮೊದಲ ಕಂಚು

ಜಕಾರ್ತಾ, ಆಗಸ್ಟ್ 28: ಏಷ್ಯನ್ ಗೇಮ್ಸ್‌ನ ಟೇಬಲ್ ಟೆನ್ನಿಸ್‌ನಲ್ಲಿ ಭಾರತದ ಪುರುಷರ ತಂಡ ಮೊದಲ ಪದಕ ಜಯಿಸಿದೆ.
ದಕ್ಷಿಣ ಕೊರಿಯಾ ವಿರುದ್ಧ ನಡೆದ ಸೆಮಿಫೈನಲ್ಸ್‌ನಲ್ಲಿ 0-3 ಅಂತರದಿಂದ ಭಾರತದ ತಂಡ ಸೋಲು ಅನುಭವಿಸಿತು.
ಸತ್ಯನ್ ಜ್ಞಾನಶೇಖರನ್, ಶರತ್ ಕಮಲ್, ಹರ್ಮೀತ್ ದೇಸಾಯಿ, ಮನ್ ಥಕ್ಕರ್ ಮತ್ತು ಆಂಥೋನಿ ಅಮಲ್ ರಾಜ್ ಅವರನ್ನು ಒಳಗೊಂಡ ತಂಡ ಕಂಚಿನ ಪದಕ ತಂದುಕೊಟ್ಟಿತು.
ಕ್ವಾರ್ಟರ್ ಫೈನಲ್ಸ್‌ನಲ್ಲಿ ಜಪಾನ್ ತಂಡಕ್ಕೆ ಆಘಾತ ನೀಡಿದ್ದ ಭಾರತ, ಸೆಮಿಫೈನಲ್ಸ್ ಪ್ರವೇಶಿಸಿತ್ತು.
ಜಪಾನ್ ವಿರುದ್ಧ ಭಾರತ 1-3ರಿಂದ ಭರ್ಜರಿ ಜಯಗಳಿಸಿತ್ತು. ವಿಶ್ವದ ನಂ 28ನೇ ಶ್ರೇಯಾಂಕದ ಜಿನ್ ಯುಯೆದಾ ಅವರನ್ನು ಭಾರತದ ಸತ್ಯನ್ ಜ್ಞಾನಶೇಖರನ್ ನೇರ ಸೆಟ್‌ಗಳಲ್ಲಿ ಸೋಲಿಸಿ ಭಾರತಕ್ಕೆ ಗೆಲುವಿನ ಹಾದಿ ಹಾಕಿಕೊಟ್ಟಿದ್ದರು.
ಬಳಿಕ ನಡೆದ ಪಂದ್ಯದಲ್ಲಿ ಶರತ್ ಕಮಲ್ ಅವರು ಕೆಂಟಾ ಮತ್ಸುದಾಯಿರಾ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದರು.
ಜಪಾನ್‌ನ 57ನೇ ಶ್ರೇಯಾಂಕದ ಮಸಕಿ ಯೋಷಿದಾ ಭಾರತದ ಹರ್ಮೀತ್ ಅವರನ್ನು 9-11, 14-12, 8-11, 11-8, 11-4 ಅಂಕಗಳಿಂದ ಸೋಲಿಸಿ ಜಪಾನ್‌ಗೆ ಒಂದು ಸೆಟ್ ಜಯಿಸಿಕೊಟ್ಟರು.
ಆದರೆ, ಸತ್ಯನ್, ಮತ್ಸುದಾಯಿರಾ ಅವರನ್ನು 12-10, 6-11, 11-7, 11-4 ಸೆಟ್‌ಗಳಿಂದ ಮಣಿಸಿ ತಂಡವನ್ನು ಮೊದಲ ಬಾರಿಗೆ ಸೆಮಿಫೈನಲ್‌ಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications