ಏಷ್ಯನ್ ಗೇಮ್ಸ್: ಜಪಾನ್ ಎದುರು ಭಾರತದ ಮಹಿಳಾ ಹಾಕಿ ತಂಡಕ್ಕೆ ಬೆಳ್ಳಿ

ಜಕಾರ್ತಾ, ಆಗಸ್ಟ್ 31: ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಹಾಕಿ ತಂಡ ಬೆಳ್ಳಿಗೆ ತೃಪ್ತಿ ಪಟ್ಟಿದೆ. ಜಪಾನ್ ಎದುರು ಉತ್ತಮ ಪ್ರದರ್ಶನವನ್ನೇ ತೋರಿದ ದೇಸಿ ತಂಡ ಅಂತಿಮವಾಗಿ ಬೆಳ್ಳಿ ಪದಕವನ್ನು ಒಪ್ಪಿಕೊಂಡಿತು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಅಗಸ್ಟ್ 31ರ ಶುಕ್ರವಾರ ನಡೆದ ಮಹಿಳಾ ಹಾಕಿ ಫೈನಲ್ ನಲ್ಲಿ ಜಪಾನ್ ಮತ್ತು ಭಾರತ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ 1-2ರ ಹಿನ್ನಡೆ ಅನುಭವಿಸಿತು. 2014ರ ಇಂಚಿಯಾನ್ ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿತ್ತು.
ಏಷ್ಯನ್ ಗೇಮ್ಸ್ 13ನೇ ದಿನದಾಂತ್ಯಕ್ಕೆ ಭಾರತದ ಖಾತೆಯಲ್ಲಿ 64 ಪದಕಗಳು ಸೇರಿವೆ. ಭಾರತವೀಗ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕಳೆದಸಾರಿ ಏಷ್ಯನ್ ಗೇಮ್ಸ್ ನಲ್ಲಿ ಭಾರತ 57 ಪದಕಗಳನ್ನು ಗೆದ್ದಿತ್ತು. ಕ್ರೀಡಾಕೂಟ ಮುಕ್ತಾಯಕ್ಕೇ ಇನ್ನೂ ಎರಡು ದಿನಗಳು ಬಾಕಿಯಿದ್ದು ಭಾರತದ ಈವರೆಗಿನ ಪದಕದ ಸಾಧನೆ ಗಮನಾರ್ಹವೆನಿಸಿದೆ.
Story first published: Friday, August 31, 2018, 20:28 [IST]
Other articles published on Aug 31, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications