ಏಷ್ಯಾನ್ ಗೇಮ್ಸ್: ಶೂಟಿಂಗ್ ನಲ್ಲಿ ಬೆಳ್ಳಿಗೆ ಗುರಿಯಿಟ್ಟ ಲಕ್ಷಯ್ ಶಿಯೊರಾನ್

ಜಕಾರ್ತಾ, ಆಗಸ್ಟ್ 20: ಏಷ್ಯನ್ ಗೇಮ್ಸ್ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ. ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಲಕ್ಷಯ್ ಶಿಯೊರಾನ್ ಬೆಳ್ಳಿ ಗೆದ್ದಿದ್ದಾರೆ. ಇಲ್ಲಿಗೆ ಭಾರತ ಪದಕ ಖಾತೆಗೆ ನಾಲ್ಕನೇ ಪದಕ ಸೇರ್ಪಡೆಯಾಗಿದೆ.
ಸೋಮವಾರ ನಡೆದ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ಶೂಟಿಂಗ್ ಟ್ರ್ಯಾಪ್ ಫೈನಲ್ ಸ್ಪರ್ಧೆಯಲ್ಲಿ ಶಿಯೊರಾನ್ ಅವರು ಬೆಳ್ಳಿಗೆ ತೃಪ್ತಿಪಟ್ಟರು. ಚೈನೀಸ್ ತೈಪೆಯ ಯಾಂಗ್ ಕುನ್ಪಿ ಅವರು ಬಂಗಾರದ ನಗು ಬೀರಿದರು. ಇದೇ ವಿಭಾಗದಲ್ಲಿ ಭಾರತದ ಮಾನವ್ಜಿತ್ ಸಿಂಗ್ ಸಿಧು ನಾಲ್ಕನೇ ಸ್ಥಾನ ಗಳಿಸುವುದರೊಂದಿಗೆ ಸ್ಪಲ್ಪದರಲ್ಲಿ ಪದಕ ಕಳೆದುಕೊಂಡಿದ್ದಾರೆ.
ಮಹಿಳಾ 50 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ವಿನೇಶ್ ಫೋಗಟ್ ಅವರೂ ಭಾರತಕ್ಕೆ ಪದಕ ಖಾತ್ರಿ ಪಡಿಸಿದ್ದಾರೆ. ಕುಸ್ತಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಬಂಗಾರ ಗೆದ್ದ ಬಳಿಕ ಮತ್ತೊಂದು ಪದಕ ಖಾತ್ರಿಯಾಗಿದೆ. ಪುರುಷರ 65 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬಜರಂಗ್ ಬಂಗಾರಕ್ಕೆ ಮುತ್ತಿಕ್ಕಿದ್ದರು.
Story first published: Monday, August 20, 2018, 15:46 [IST]
Other articles published on Aug 20, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications