ಏಷ್ಯನ್ ಗೇಮ್ಸ್ 2018: ಮೊಹಮ್ಮದ್ ಅನಾಸ್ ಗೆ 400 ಮೀ. ನಲ್ಲಿ ಬೆಳ್ಳಿ ಪದಕ

ಜಕಾರ್ತಾ, ಆಗಸ್ಟ್ 26: ಪುರುಷರ ವಿಭಾಗದ ಭರವಸೆಯ ಓಟಗಾರ ಭಾರತದ ಮೊಹಮ್ಮದ್ ಅನಾಸ್ ಯಾಹಿಯ ಅವರಿಗೆ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ಪುರುಷರ 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಒಲಿದಿದೆ. 45.69 ಸೆಕೆಂಡ್ ಗಳಲ್ಲಿ ಮೊಹಮ್ಮದ್ ಅವರು ಗುರಿ ತಲುಪಿದರು.
ಭಾನುವಾರ ನಡೆದ ಪುರುಷರ 400 ಮೀ. ಓಟದ ಫೈನಲ್ ನಲ್ಲಿ ಬೆಳ್ಳಿ ಪದಕ ಅನಾಸ್ ಯಾಹಿಯ ಪಾಲಾಯಿತು. ಇದಕ್ಕೂ ಕೊಂಚ ಮೊದಲಷ್ಟೇ ಭಾರತದ ಹಿಮಾದಾಸ್ ಮಹಿಳಾ ವಿಭಾಗದ 400 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ತನ್ನದಾಗಿಸಿಕೊಂಡಿದ್ದರು.
ಮಹಿಳಾ ವಿಭಾಗದ 400 ಮೀ. ಓಟದಲ್ಲಿ ಚಿನ್ನದ ಪದಕ ಬಹ್ರೇನ್ ಓಟಗಾರ್ತಿ ಸಲ್ವಾ ನಾಸರ್ ಪಾಲಾಗಿತ್ತು. ಸಲ್ವಾ ಅವರು 50.09 ಸೆಕೆಂಡ್ ಕಾಲಾವಧಿಯಲ್ಲಿ ಗುರಿ ತಲುಪಿ ಚಿನ್ನ ಜಯಿಸಿದ್ದರು.
Story first published: Sunday, August 26, 2018, 20:37 [IST]
Other articles published on Aug 26, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications