ಏಷ್ಯನ್ ಗೇಮ್ಸ್: ಭಾರತಕ್ಕೆ ಮತ್ತೊಂದು ಕಂಚು ಸೇರಿಸಿದ ನರೇಂದರ್

ಜಕಾರ್ತಾ, ಆಗಸ್ಟ್ 22: ಇಂಡೋನೇಷ್ಯ ಏಷ್ಯನ್ ಗೇಮ್ಸ್ ವುಶು ಸ್ಪರ್ಧೆಯಲ್ಲಿ ಭಾರತದ ಪದಕ ಖಾತೆಗೆ ವುಶು ಸ್ಪರ್ಧಿ ನರೇಂದರ್ ಗ್ರೇವಾಲ್ ಅವರು ಮತ್ತೊಂದು ಕಂಚು ಸೇರಿಸಿದ್ದಾರೆ. ಪುರುಷರ 65 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ನರೇಂದರ್ ಗೆ ಕಂಚು ಒಲಿದಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಬುಧವಾರ (ಆಗಸ್ಟ್ 22) ನಡೆದ ಪುರುಷರ ವುಶು 65 ಕೆಜಿ ಸಾಂಡಾ ವಿಭಾಗದಲ್ಲಿ ನರೇಂದರ್ ಸ್ಪರ್ಧಿಸಿ ಕಂಚು ತನ್ನದಾಗಿಸಿಕೊಂಡಿದ್ದಾರೆ. ನರೇಂದರ್ ಅವರಿಗೂ ಮೊದಲು ವುಶು ಸ್ಪರ್ಧೆಯಲ್ಲಿ ಭಾರತದ ತೆಕ್ಕೆಗೆ ಮೂರು ಕಂಚಿನ ಪದಕಗಳು ಲಭಿಸಿದ್ದವು. ಸಂತೋಷ್ ಕುಮಾರ್, ಸೂರ್ಯ ಭಾನು ಪ್ರತಾಪ್ ಮತ್ತು ರೋಶಿಬಿನಾ ದೇವಿ ಅವರು ಕ್ರಮವಾಗಿ ಭಾರತಕ್ಕೆ ಕಂಚು ಗೆದ್ದಿದ್ದರು.
ಸಂತೋಷ್, ಸೂರ್ಯ ಭಾನು ಮತ್ತು ರೋಶಿಬಿನಾ ಈ ಮೂವರೂ ಬುಧವಾರ ನಡೆದ ಸೆಮಿ ಫೈನಲ್ಸ್ ಪಂದ್ಯದಲ್ಲಿ ಸೋತ ಕಾರಣ ಭಾರತ ಕಂಚಿಗೆ ತೃಪ್ತಿ ಪಡುವಂತಾಯ್ತು. ಸಂತೋಷ್ ಕುಮಾರ್ 56 ಕೆಜಿ ವಿಭಾಗದಲ್ಲಿ, ಸೂರ್ಯ ಭಾನು 60 ಕೆಜಿ ವಿಭಾಗದಲ್ಲಿ ಮತ್ತು ರೋಶಿಬಿನಾ ಅವರು 60 ಕೆಜಿ ವಿಭಾಗದ ವುಶು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications