ಏಷ್ಯನ್ ಗೇಮ್ಸ್: ಫೈನಲ್ ಪ್ರವೇಶಿಸಿದ ಪಿವಿ ಸಿಂಧು

ಜಕಾರ್ತಾ, ಆಗಸ್ಟ್ 27: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಬ್ಯಾಡ್ಮಿಂಟನ್ ವಿಭಾಗದ ಸೆಮಿಫೈನಲ್ಸ್‌ನಲ್ಲಿ ಭಾರತದ ಪಿ.ವಿ. ಸಿಂಧು, ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.
ಇದರಿಂದ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಿದೆ. ಫೈನಲ್‌ನಲ್ಲಿ ಅವರು ನಂಬರ್ ಒನ್ ಶ್ರೇಯಾಂಕಿತೆ ತೈವಾನ್‌ನ ತಾಯ್ ತ್ಸು ಯಿಂಗ್ ಅವರನ್ನು ಎದುರಿಸಲಿದ್ದಾರೆ.
ಸೋಮವಾರ ನಡೆದ ಎರಡನೆಯ ಸೆಮಿಫೈನಲ್ಸ್‌ನಲ್ಲಿ ಸಿಂಧು, ಯಮಗುಚಿ ವಿರುದ್ಧ 21-17, 15-21, 21-10 ವಿರುದ್ಧ ಜಯ ಸಾಧಿಸಿದರು.
ಮೊದಲ ಸೆಟ್‌ನಲ್ಲಿ ಚುರುಕಿನ ಆಟವಾಡಿದ ಸಿಂಧು ಮತ್ತು ಯಮಗುಚಿ ನಿಕಟ ಪೈಪೋಟಿ ನಡೆಸಿದರು. ಕೊನೆಗೆ ಸಿಂಧು ಪ್ರಾಬಲ್ಯ ಮೆರೆದರು. ಎರಡನೆಯ ಸೆಟ್‌ನಲ್ಲಿ ಯಮಗುಚಿ ಸಂಪೂರ್ಣ ಮೇಲುಗೈ ಸಾಧಿಸಿದರು. ಎರಡು ಸೆಟ್‌ಗಳಲ್ಲಿ ಸಮಬಲ ಸಾಧಿಸಿದ್ದರಿಂದ ಪಂದ್ಯ ಹೆಚ್ಚು ಕುತೂಹಲ ಕೆರಳಿಸಿತ್ತು.
ಮೂರನೇ ಸೆಟ್‌ನಲ್ಲಿ ಮೊದಲ ಅಂಕ ಯಮಗುಚಿ ಪಾಲಾದರೂ, ನಂತರ ಸಿಂಧು ಲಯ ಕಂಡುಕೊಂಡರು. ಸಿಂಧು ಅವರ ವೇಗದ ಆಟಕ್ಕೆ ಯಮಗುಚಿ ಉತ್ತರ ನೀಡುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications