
ಜಕಾರ್ತಾ, ಆಗಸ್ಟ್ 22: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ 4ನೇ ಚಿನ್ನದ ಪದಕ ಲಭಿಸಿದೆ. ಶೂಟಿಂಗ್ ಮಹಿಳಾ ವಿಭಾಗದಲ್ಲಿ ರಾಹಿ ಜೀವನ್ ಸರ್ನೋಬತ್ ಅವರು ಭಾರತಕ್ಕೆ ಬಂಗಾರ ಗೆದ್ದಿದ್ದಾರೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಬುಧವಾರ (ಆಗಸ್ಟ್ 22) ನಡೆದ ಶೂಟಿಂಗ್ ನ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ರಾಹಿ ಭಾರತಕ್ಕೆ ಚಿನ್ನ ಜಯಿಸಿದರು. ಇದರೊಂದಿಗೆ ಭಾರತದ ಪದಕ ಖಾತೆಗೆ ಒಟ್ಟು 11 ಪದಕಗಳು ಸೇರ್ಪಡೆಗೊಂಡಿವೆ. ಪದಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ.
ಸ್ಪರ್ಧೆ ಆರಂಭಗೊಂಡ ಆಗಸ್ಟ್ 19ರಂದು ಶೂಟಿಂಗ್ ವಿಭಾಗದಲ್ಲಿ ಅಪೂರ್ವಿ ಚಾಂದೇಲ ಮತ್ತು ರವಿಕುಮಾರ್ ಜೋಡಿ 10 ಮೀ. ಏರ್ ರೈಫಲ್ ನಲ್ಲಿ ಕಂಚಿನೊಂದಿಗೆ ಪದಕ ಖಾತೆ ತೆರೆದಿದ್ದರು. ಆನಂತರದಿಂದ ಭಾರತದ ಪದಕ ಬೇಟಿ ಶುರುವಾಗಿತ್ತು.