ಏಷ್ಯನ್ ಗೇಮ್ಸ್: 4X400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ

ಜಕಾರ್ತಾ, ಆಗಸ್ಟ್ 28: ಏಷ್ಯನ್ ಗೇಮ್ಸ್ ಕ್ರೀಡಾಕೂಟದ 4X400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಭಾರತದ ಪಾಲಾಗಿದೆ. ಹಿಮಾ ದಾಸ್ ತಂಡಕ್ಕೆ ಸೇರ್ಪಡೆಗೊಂಡಿದ್ದರಿಂದ ಬಂಗಾರವನ್ನು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮವಾಗಿ ಬೆಳ್ಳಿಗೆ ಭಾರತ ತೃಪ್ತಿ ಪಡುವಂತಾಗಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಮಂಗಳವಾರ (ಆಗಸ್ಟ್ 28) ನಡೆದ 4X400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತು. ಇಬ್ಬರು ಪುರುಷರು ಮತ್ತಿಬ್ಬರು ಮಹಿಳೆಯರನ್ನೊಳಗೊಂಡ ದೇಸಿ ತಂಡ 400 ಮೀಟರನ್ನು ನಾಲ್ಕನೇ ಸುತ್ತಿಗೆ 3:15.71 ಸೆಕೆಂಡ್ ಗಳಲ್ಲಿ ಮುಗಿಸಿ ಬೆಳ್ಳಿ ತನ್ನದಾಗಿಸಿಕೊಂಡಿತು. ಈ ಸ್ಪರ್ಧೆಯನ್ನು 3:11.89 ಸೆಕೆಂಡ್ ಗಳಲ್ಲಿ ಮುಗಿಸಿದ ಬಹ್ರೇನ್ ಚಿನ್ನ ಬಾಚಿಕೊಂಡಿತು.
ಮಿಶ್ರ ರಿಲೇ ತಂಡದಲ್ಲಿ ಇದೇ ಏಷ್ಯನ್ ಗೇಮ್ಸ್ ನ ಪುರುಷರ 400 ಮೀ. ಓಟದಲ್ಲಿ ಬೆಳ್ಳಿ ಗೆದ್ದ ಮೊಹಮ್ಮದ್ ಅನಾಸ್, ಪ್ರತಿಭಾನ್ವಿತ ಓಟಗಾರ್ತಿ-ಕನ್ನಡತಿ ಎಂಆರ್ ಪೂವಮ್ಮ, ಅರೋಕಿಯಾ ರಾಜೀವ್ ಮತ್ತು ಏಷ್ಯನ್ ಮಹಿಳಾ ವಿಭಾಗದ 400 ಮೀ. ಬೆಳ್ಳಿ ವಿಜೇತೆ ಹಿಮಾದಾಸ್ ಪಾಲ್ಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications