ಏಷ್ಯನ್ ಗೇಮ್ಸ್ 2018: ಸೇಲಿಂಗ್ ನಲ್ಲಿ ವರುಣ್-ಗಣಪತಿ ಜೋಡಿಗೆ ಕಂಚು

ಜಕಾರ್ತಾ, ಆಗಸ್ಟ್ 31: ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಸೇಲಿಂಗ್ ಸ್ಪರ್ಧೆಯಲ್ಲಿ ಭಾರತದ ಪುರುಷರ ಜೋಡಿಗೆ ಕಂಚಿನ ಪದಕ ಲಭಿಸಿದೆ. ಭಾರತದ ವರುಣ್ ಠಾಕರ್ ಮತ್ತು ಗಣಪತಿ ಚೆಂಗಪ್ಪ ಜೋಡಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ.
ಅಗಸ್ಟ್ 31ರ ಶುಕ್ರವಾರ ನಡೆದ ಪುರುಷರ ಸೇಲಿಂಗ್ 49er ಈವೆಂಟಿನಲ್ಲಿ ವರುಣ್-ಗಣಪತಿ ಜೋಡಿ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಪುರುಷರ ವಿಭಾಗದ ಒಟ್ಟು 15 ರೇಸ್ ಸ್ಪರ್ಧೆಯ ಬಳಿಕ ಈ ಜೋಡಿ ತೃತೀಯ ಸ್ಥಾನ ಗಳಿಸಿತು.
ಶುಕ್ರವಾರವೇ ನಡೆದ ಸೇಲಿಂಗ್ ಮಿಶ್ರ ಓಪನ್ ನಲ್ಲಿ ಭಾರತದ ಹರ್ಷಿತಾ ತೋಮರ್ ಕಂಚಿನ ಪದಕ ಗೆದ್ದಿದ್ದರು. ವರ್ಷಾ ಮತ್ತು ಶ್ವೇತಾ ಬೆಳ್ಳಿಯ ಜೋಡಿಯೂ ಬೆಳ್ಳಿ ಪದಕ ಜಯಿಸಿತು. ಹೀಗಾಗಿ ಸೇಲಿಂಗ್ ನಲ್ಲಿ ಒಟ್ಟು 3 ಪದಕಗಳು ಭಾರತದ ಪಾಲಾಗಿವೆ.
Story first published: Friday, August 31, 2018, 16:09 [IST]
Other articles published on Aug 31, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications