ಏಷ್ಯನ್ ಗೇಮ್ಸ್: ಭಾರತ ಪರ ಎರಡನೇ ಬಂಗಾರ ಗೆದ್ದ ವಿನೇಶ್ ಫೋಗಟ್

ಜಕಾರ್ತಾ, ಆಗಸ್ಟ್ 20: ವಿನೇಶ್ ಫೋಗಟ್ ಅವರು ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮಹಿಳಾ 50 ಕೆಜಿ ಕುಸ್ತಿ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ ಗೆದ್ದಿದ್ದಾರೆ. ಜಪಾನ್ ಕುಸ್ತಿಪಟು ಸನ್ ಯಾನನ್ ಎದುರು ವಿನೇಶ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
2016ರ ಒಲಿಂಪಿಕ್ಸ್ ನಲ್ಲಿ ಜಪಾನ್ ಆಟಗಾರ್ತಿ ಯಾನನ್ ವಿನೇಶ್ ಫೋಗಾಟ್ ಅವರನ್ನು ಸೋಲಿಸಿದ್ದರು. ಆದರೆ 2018ರ ಏಷ್ಯಾನ್ ಗೇಮ್ಸ್ ನಲ್ಲಿ ವಿನೇಶ್ ಅವರು ಜಪಾನ್ ಆಟಗಾರ್ತಿಗೆ ಸೋಲುಣಿಸಿ ಭಾರತ ಪರ ಎರಡನೇ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮಹಿಳಾ 50 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕ ಖಾತ್ರಿ ಪಡಿಸಿದ್ದಾರೆ. ಕುಸ್ತಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಬಂಗಾರ ಗೆದ್ದ ಬಳಿಕ ಮತ್ತೊಂದು ಪದಕ ಖಾತ್ರಿ ಪಡಿಸಿದ್ದರು.
ಮಹಿಳಾ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ಸೆಮಿಫೈನಲ್ಸ್ ನಲ್ಲಿ ವಿನೇಶ್ ಅವರು ಉಜ್ಬೇಕಿಸ್ತಾನ್ ಕುಸ್ತಿಪಟು ಯಖ್ಖಿಮುಮುರಾಟೊವಾ ಡೌಲೆಟ್ಬೈಕ್ ಅವರನ್ನು 10-0 ಅಂತರದಿಂದ ಸೋಲಿಸಿದ್ದರು.
ಆದರೆ ಮಹಿಳಾ ವಿಭಾಗದಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದ ಸಾಕ್ಷಿ ಮಲಿಕ್ ಮತ್ತು ಪೂಜಾ ಧಂಡಾ ಸೋಮವಾರ ನಡೆದ ಸೆಮಿಫೈನಲ್ಸ್ ನಲ್ಲಿ ಸೋತಿದ್ದಾರೆ. ಭಾನುವಾರ (ಆಗಸ್ಟ್ 19) ನಡೆದಿದ್ದ ಪುರುಷರ 65 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬಜರಂಗ್ ಭಾರತಕ್ಕೆ ಚೊಚ್ಚಲ ಪದಕ ಗೆದ್ದಿದ್ದರು.
ಶೂಟಿಂಗ್ ವಿಭಾಗದಲ್ಲಿ ಅಪೂರ್ವಿ ಚಾಂದೇಲ ಮತ್ತು ರವಿಕುಮಾರ್ ಜೋಡಿ 10 ಮೀ. ಏರ್ ರೈಫಲ್ ನಲ್ಲಿ ಕಂಚಿನೊಂದಿಗೆ ಪದಕ ಖಾತೆ ತೆರೆದಿದ್ದರು. ಅದಾಗಿ ಶೂಟಿಂಗ್ ವಿಭಾಗದ ಪುರುಷರ 10 ಮೀ. ಏರ್ ರೈಫಲ್ ನಲ್ಲಿ ದೀಪಕ್ ಕುಮಾರ್ ರಜತ ಪದಕದೊಂದಿಗೆ ಭಾರತದ ಪದಕ ಖಾತೆಯನ್ನು ಬೆಳೆಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications