Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games: ಸ್ಕ್ವಾಷ್ ಫೈನಲ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ: ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು

ಪುರುಷರ ಸ್ಕ್ವಾಷ್ ತಂಡ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಬದ್ಧ ಎದುರಾಳಿ ಪಾಕಿಸ್ತಾನವನ್ನು ಭರ್ಜರಿಯಾಗಿ ಮಣಿಸಿದ್ದು ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಸೌರವ್ ಘೋಷಾಲ್, ಅಭಯ್ ಸಿಂಗ್ ಮತ್ತು ಮಹೇಶ್ ಮಂಗಾವ್‌ಂಕರ್ ಅವರನ್ನು ಒಳಗೊಂಡ ತಂಡ ರೋಚಕ ಸೆಣೆಸಾಟದಲ್ಲಿ ಗೆದ್ದು ಬೀಗಿದೆ.

ಮೊದಲ ಗೇಮ್‌ನಲ್ಲಿ ಸೋಲು ಅನುಭವಿಸಿದ ಭಾರತೀಯ ತಂಡ 0-1 ಅಂತರದಿಂದ ಹಿನ್ನಡೆಯಲ್ಲಿತ್ತು. ಆದರೆ ಸೌರವ್ ಘೋಷಾಲ್ ಭಾರತದ ಕಮ್‌ಬ್ಯಾಕ್‌ಗೆ ಕಾರಣವಾದರು. ಇನ್ನು ನಿರ್ಣಾಯಕ ಘಟ್ಟದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ ಅಭಯ್ ಸಿಂಗ್ ಗೇಮ್‌ಅನ್ನು 3-2 ಅಂತರದಿಂದ ಗೆದ್ದುಕೊಂಡರು. ಈ ಗೆಲುವಿನಿಂದ ಭಾರತ 2-1 ಅಂಕಗಳ ಅಂತರದಿಂದ ಚಿನ್ನದ ಪದಕ ಗೆದ್ದುಕೊಂಡಿದೆ.

Asian Games 2023: India Clinches Gold in Mens Squash Team Event by Defeating Pakistan

ಮೊದಲ ಗೇಮ್‌ನಲ್ಲಿ ಸೋತ ಭಾರತ ಎರಡನೇ ಗೇಮ್ ಗೆದ್ದು ಸಮಬಲ ಸಾಧಿಸಿತು. ನಂತರ ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಅಭಯ್ ಸಿಂಗ್ ಪಾಕಿಸ್ತಾನದ ನೂರ್ ಜಮಾನ್ ಅವರನ್ನು ಎದುರಿಸಿದರು. ಈ ಮುಖಾಮುಖಿಯಲ್ಲಿ ಅಭಯ್ ಸಿಂಗ್ 11-7, 9-11, 7-11, 11-9, 12-10 ಗೆದ್ದುಕೊಂಡು ಚಿನ್ನದ ಪದಕವನ್ನು ಖಚಿತಪಡಿಸಿದರು.

ಮೊದಲ ಪಂದ್ಯವನ್ನು 11-8, 11-3, 11-2 ರಲ್ಲಿ ಗೆದ್ದುಕೊಂಡ ನಾಸಿರ್ ಇಕ್ಬಾಲ್ ಭಾರತದ ಮಹೇಶ್ ಮಂಗಾಂವ್ಕರ್ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರಿಂದ ಆರಂಭಿಕ ಹಿನ್ನಡೆಗೆ ಒಳಗಾಗಿತ್ತು. ನಂತರ ಭಾರತದ ಸೌರವ್ ಘೋಷಲ್ ಪಾಕ್‌ನ ಮುಹಮ್ಮದ್ ಅಸಿಮ್ ಖಾನ್ ಅವರನ್ನು 11-5, 11-1, 11-3 ಅಂತರದಿಂದ ಸೋಲಿಸಿ ಸ್ಪರ್ಧೆಯಲ್ಲಿ 1-1 ಅಂತರದ ಸಮಬಲ ಸಾಧಿಸುವ ಮೂಲಕ ಕಮ್‌ಬ್ಯಾಕ್‌ಗೆ ಕಾರಣವಾದರು.

Story first published: Saturday, September 30, 2023, 16:16 [IST]
Other articles published on Sep 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+