Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games: ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದ ಭಾರತ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಈಕ್ವೆಸ್ಟ್ರಿಯನ್(ಕುದುರೆ ಸವಾರಿ) ವಿಭಾಗದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. 1982ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಬಳಿಕ ಇದೇ ಮೊದಲ ಬಾರಿಗೆ ಭಾರತ ಈಕ್ವೆಸ್ಟ್ರಿಯನ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡ ಸಾಧನೆ ಮಾಡಿದ್ದು ಬರೊಬ್ಬರಿ 41 ವರ್ಷಗಳ ಚಿನ್ನದ ಪದಕದ ಕನಸನ್ನು ನನಸಾಗಿಸಿಕೊಂಡಿದೆ. ಈಕ್ವೆಸ್ಟ್ರಿಯನ್ ಟೀಮ್ ಡ್ರೆಸ್ಸೇಜ್ ವಿಭಾಗದಲ್ಲಿ ಭಾರತ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

ಟೀಮ್ ಡ್ರೆಸ್ಸೇಜ್ ಈವೆಂಟ್‌ನಲ್ಲಿ ಭಾರತ ತಂಡ ಒಟ್ಟು 209.205 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಇನ್ನು ಎರಡನೇ ಸ್ಥಾನ ಪಡೆದುಕೊಂಡ ಚೀನಾ 204.882 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದ್ದು ಹಾಂಗ್ ಕಾಂಗ್ 204.852 ರೊಂದಿಗೆ 3 ನೇ ಸ್ಥಾನ ಪಡೆದುಕೊಂಡಿತು.

Asian Games 2023: India win historical Gold medal in equestrian

ಸುದೀಪ್ತಿ ಹಜೇಲಾ (ಚಿನ್ಸ್ಕಿ - ಕುದುರೆ ಹೆಸರು), ಹೃದಯ್ ವಿಪುಲ್ ಛೇಡಾ (ಕೆಮ್‌ಕ್ಸ್‌ಪ್ರೊ ಎಮರಾಲ್ಡ್), ಅನುಷ್ ಅಗರ್‌ವಾಲಾ (ಇಟ್ರೋ), ಮತ್ತು ದಿವ್ಯಕೃತಿ ಸಿಂಗ್ (ಅಡ್ರಿನಾಲಿನ್ ಫಿರ್‌ಫೊಡ್) ಅವರ ಭಾರತೀಯ ತಂಡ ಕುದುರೆ ಸವಾರಿಯ ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಬರೆದಿದೆ. ಡ್ರೆಸ್ಸೇಜ್ ಟೀಮ್ ಈವೆಂಟ್‌ನಲ್ಲಿ ತಂಡದ ಒಟ್ಟಾರೆ ಸ್ಕೋರ್‌ಗೆ ಅಗ್ರ 3 ಪ್ರದರ್ಶಕರ ಅಂಕಗಳನ್ನು ಮಾತ್ರ ಪರಿಗಣಿಸಲಾಗಿದೆ.

ಅನುಷ್ ಅಗರ್‌ವಾಲಾ ಅವರ ಸ್ಕೋರ್ 71.088 ಈ ಚಿನ್ನದ ಪದಕದಲ್ಲಿ ನಿರ್ಣಾಯಕ ಪಾತ್ರವಹಿಸಿತು. ಕೊನೆಯ ಹಂತದವರೆಗೂ ಭಾರತದ ಪದಕದ ನಿರೀಕ್ಷೆಯನ್ನು ಹೆಚ್ಚಿಸಿದರು ಅನುಷ್. ಏಷ್ಯನ್ ಗೇಮ್ಸ್ 2018 ರಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದ ಭಾರತ ಈ ಬಾರಿ ಚೀನಾ ತಂಡವನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಈಕ್ವೆಸ್ಟ್ರಿಯನ್‌ನಲ್ಲಿ ಭಾರತ ಗೆದ್ದ ನಾಲ್ಕನೇ ಚಿನ್ನದ ಪದಕ ಮತ್ತು ಈವೆಂಟ್‌ನಲ್ಲಿ ಒಟ್ಟಾರೆಯಾಗಿ 13ನೇ ಪದಕವಾಗಿದೆ. ಈಕ್ವೆಸ್ಟ್ರಿಯನ್‌ನಲ್ಲಿ ಭಾರತದ ಈ ಹಿಂದಿನ ಎಲ್ಲಾ ಮೂರು ಚಿನ್ನದ ಪದಕಗಳು ಕೂಡ 1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬಂದಿದ್ದವು ಎನ್ನುವುದು ಗಮನಾರ್ಹ. ರಘುಬೀರ್ ಸಿಂಗ್ ವೈಯಕ್ತಿಕ ವಿಭಾಗದಲ್ಲಿ ಚಿನ್ನವನ್ನು ಗೆದ್ದರೆ, ಭಾರತ ಟೀಮ್ ಈವೆಂಟ್ ಅನ್ನು ಕೂಡ ಗೆದ್ದುಕೊಂಡಿತ್ತು. ಇನ್ನು ರೂಪಿಂದರ್ ಸಿಂಗ್ ಬ್ರಾರ್ ವೈಯಕ್ತಿಕ ಟೆಂಟ್ ಪೆಗ್ಗಿಂಗ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.

Story first published: Tuesday, September 26, 2023, 16:21 [IST]
Other articles published on Sep 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+