ಭಾರತ ಮಹಿಳಾ ಟೇಬಲ್ ಟೆನಿಸ್ ತಂಡ ಗ್ರೂಪ್-ಎಫ್ ಸೆಣೆಸಾಟದಲ್ಲಿ ನೇಪಾಳ ತಂಡವನ್ನು ಎದುರಿಸಿದ್ದು ನೇರ ಗೇಮ್‌ಗಳಲ್ಲಿ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ 2023 ರ ಮುಂದಿನ ಸುತ್ತಿಗೆ ಮುನ್ನಡೆ ಪಡೆದುಕೊಂಡಿದೆ. ದಿಯಾ ಪರಾಗ್ ಚಿತಾಲೆ, ಐಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಅವರು ಗ್ರೂಪ್-ಎಫ್‌ನಲ್ಲಿ ನೇಪಾಳವನ್ನು 3-0 ಗೋಲುಗಳಿಂದ ಸೋಲಿಸಿದ್ದಾರೆ.
ದಿಯಾ ಪರಾಗ್ ಚಿತಾಳೆ ಅವರು ಮೊದಲ ಗೇಮ್‌ನಲ್ಲಿ ಸಿಕ್ಕಾ ಶ್ರೇಷ್ಠ ಅವರನ್ನು 11-1 ರಿಂದ ಸೋಲಿಸುವ ಮೂಲಕ ಭಾರತಕ್ಕೆ ಅದ್ಭುತ ಆರಂಭ ನೀಡಿದರು. ನಂತರ ತನ್ನ ನೇಪಾಳದ ಎದುರಾಳಿಯನ್ನು 11-6 ಅಂತರದಿಂದ ಸೋಲಿಸಿ ಎರಡನೇ ಗೇಮ್‌ನಲ್ಲಿಯೂ ಗೆಲುವು ಸಾಧಿಸಿದರು. ಅಂತಿಮ ಪಂದ್ಯದಲ್ಲಿ ಚಿತಾಲೆ 13 ನಿಮಿಷಗಳಲ್ಲಿ ಶ್ರೇಷ್ಠಾರನ್ನು 11-8 ರಿಂದ ಸೋಲಿಸಿ ನೇಪಾಳ ವಿರುದ್ಧ ಭಾರತ 1-0 ಮುನ್ನಡೆ ಸಾಧಿಸಲು ಕಾರಣವಾದರು.

ನಂತರ ಸ್ಪರ್ಧೆಯ ಎರಡನೇ ಪಂದ್ಯದಲ್ಲಿ ಅಹಿಕಾ ಮುಖರ್ಜಿ ಅವರು ನಬಿತಾ ಶ್ರೇಷ್ಠಾ ಅವರನ್ನು ಎದುರಿಸಿದರು. ನಬಿತಾ ವಿರುದ್ಧ ಭಾರತೀಯ ಆಟಗಾರ್ತಿ 11-3 ಅಂತರದಿಂದ ಗೆಲುವಿನೊಂದಿಗೆ ಮೊದಲ ಗೇಮ್‌ನಲ್ಲಿ ಚಿತಾಲೆ ಅವರಿಂದ ಬಂದ ಮುನ್ನಡೆಯನ್ನು ಮುಂದುವರಿಸುವಲ್ಲಿ ಯಶಸ್ವಿಯಾದರು. ಅಹಿಕಾ ಮುಖರ್ಜಿ ತನ್ನ ಆಕ್ರಮಣವನ್ನು ಮುಂದುವರೆಸಿದ್ದು ಎರಡನೇ ಪಂದ್ಯದಲ್ಲಿ ತಮ್ಮ ಎದುರಾಳಿಯನ್ನು 11-7 ರಿಂದ ಸೋಲಿಸಿದರು. ನಂತರ ನಬಿತಾ ಅವರನ್ನು 11-2 ರಿಂದ ಸೋಲಿಸುವ ಮೂಲಕ ಭಾರತಕ್ಕೆ 2-0 ಮುನ್ನಡೆ ಒದಗಿಸಿದ್ದಾರೆ.
ಇನ್ನು ಸುತೀರ್ಥ ಮುಖರ್ಜಿ ಕಣಕ್ಕಿಳಿದು ಮೂರನೇ ಸುತ್ತಿನಲ್ಲಿ ಇವಾನಾ ಥಾಪಾ ಮಗರ್ ಅವರನ್ನು ಎದುರಿಸಿದರು. ಮೊದಲ ಗೇಮ್‌ನಲ್ಲಿ 11-1 ಅಂತರದಿಂದ ಪ್ರಬಲ ಗೆಲುವು ಸಾಧಿಸಿ ಭರ್ಜರಿ ಮುನ್ನಡೆ ಒದಗಿಸಿದ್ದಾರೆ. ನಂತರ ಅವರು ಮಗರ್ ಅವರನ್ನು 11-5 ರಿಂದ ಸೋಲಿಸಿ ಎರಡನೇ ಗೇಮ್ ಅನ್ನು ಸುಲಭವಾಗಿ ಗೆದ್ದರು. ಸುತೀರ್ಥ ಅವರು 11-2 ಅಂತರದ ಗೆಲುವಿನೊಂದಿಗೆ ಪಂದ್ಯವನ್ನು ಮುಗಿಸಿದರು ಮತ್ತು ಭಾರತವನ್ನು 3-0 ಗೆಲುವಿನೊಂದಿಗೆ ಮುಂದಿನ ಸುತ್ತಿಗೆ ಪ್ರವೇಶಿಸಲು ಕಾರಣವಾದರು.
ಇನ್ನು ಇದಕ್ಕೂ ಮುನ್ನ ಸ್ಟಾರ್ ಷಟ್ಲರ್ ಮನಿಕಾ ಬಾತ್ರಾ ನೇತೃತ್ವದ ಮಹಿಳಾ ತಂಡ ಸಿಂಗಾಪುರ ವಿರುದ್ಧದ ಪ್ರಯಾಸದ ಗೆಲುವು ಸಾಧಿಸಿತ್ತು. ಅಯ್ಹಿಕಾ ಮುಖರ್ಜಿ 11-7 2-11 7-11 10-12 ಜಿಯಾನ್ ಝೆಂಗ್ ವಿರುದ್ಧ ಸೋತಿದ್ದರಿಂದ ಭಾರತೀಯ ಮಹಿಳೆಯರಿಗೆ ಆರಂಭ ಉತ್ತಮವಾಗಿರಲಿಲ್ಲ. ಆದರೆ ಮನಿಕಾ ಬಾತ್ರಾ ಭಾರತದ ಪರವಾಗಿ ಸ್ಕೋರ್‌ಗಳನ್ನು ಸಮಗೊಳಿಸಿದರು, ಜಿಂಗಿ ಝೌ ಅವರನ್ನು 11-9 9-11 11-7 11-3 ರಿಂದ ಸೋಲಿಸಿದರು ಸಮಬಲದ ಸಾಧನೆಗೆ ಕಾರಣವಾದರು. ನಂತರ ಶ್ರೀಜಾ ಅಕುಲಾ 12-14 11-9 8-11 11-9 11- ಹೋರಾಟದ ಮೂಲಕ ಭಾರತಕ್ಕೆ ಮುನ್ನಡೆ ನೀಡಿದರು. ನಂತರ ಶ್ರೀಜಾ ಅಕುಲಾ ಅವರು ಕ್ಸಿನ್ ರು ವಾಂಗ್ ವಿರುದ್ಧ 12-14 11-9 8-11 11-9 11-7 ಅಂತರ ಗೆಲುವಿನೊಂದಿಗೆ ಭಾರತಕ್ಕೆ ಮುನ್ನಡೆ ನೀಡಿದರು.