Asian Games: ಭಾರತೀಯ ಫುಟ್ಬಾಲ್ ತಂಡಗಳ ಭಾಗವಹಿಸುವಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕ್ರೀಡಾ ಇಲಾಖೆ
ಭಾರತದ ಫುಟ್ಬಾಲ್ ಪ್ರೇಮಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಮುಂದಿನ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಭಾರತ ಪುರುಷ ಮತ್ತು ಮಹಿಳಾ ಫುಟ್‌ಬಾಲ್ ತಂಡಗಳಿಗೆ ಗ್ರೀನ್ ಸಿಗ್ನಲ್ ದೊರೆತಿದೆ. ಏಷ್ಯಾದ ಅತಿ ದೊಡ್ಡ ಕ್ರಿಡಾಕೂಟದಲ್ಲಿ ಈ ಎರಡೂ ತಂಡಗಳು ಭಾಗವಹಿಸಲು ಅನುಕೂಲವಾಗುವಂತೆ ನಿಯಮಗಳನ್ನು ಸಡಿಲಿಸಲು ತಮ್ಮ ಸಚಿವಾಲಯ ನಿರ್ಧರಿಸಿದೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಟ್ವೀಟ್‌ನಲ್ಲಿ ಖಚಿತಪಡಿಸಿದ್ದಾರೆ.
"ಈಗಾಗಲೇ ಇರುವ ಮಾನದಂಡದ ಪ್ರಕಾರ ಅರ್ಹತೆ ಪಡೆಯದ ಭಾರತದ ಪುರುಷ ಹಾಗೂ ಮಹಿಳಾ ಫುಟ್ಬಾಲ್ ತಂಡಗಳ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ನಿಯಮಗಳನ್ನು ಸಡಿಲಿಸಲಾಗಿದೆ. ಭಾರತ ಸರ್ಕಾರದ ಯೂತ್ ಅಫೇರ್ಸ್ ಮತ್ತು ಕ್ರೀಡಾ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ" ಎಂದು ಅನುರಾಗ್ ಠಾಕೂರ್ ಜುಲೈ 26 ರಂದು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ತಂಡದ ಪ್ರದರ್ಶನಕ್ಕೆ ದೊರೆತ ಮನ್ನಣೆ
"ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಅತ್ಯುತ್ತಮ ಪ್ರದರ್ಶನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಎರಡು ತಂಡಗಳಿಗೂ ಅನುಕೂಲವಾಗುವ ರೀತಿಯಲ್ಲಿ ನಿಯಮಗಳಲ್ಲಿ ಸಡಿಲಮಾಡಿದೆ. ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಈ ಎರಡು ತಂಡಗಳು ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿ ಎನ್ನುವುದು ಆಶಯ" ಎಂದು ಅನುರಾಗ್ ಠಾಕೂರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
2018ರಲ್ಲಿ ಅವಕಾಶ ಪಡೆಯದ ಭಾರತ ಫುಟ್ಬಾಲ್ ತಂಡ
ಗಮನಾರ್ಹ ಅಂಶವೆಂದರೆ ಭಾರತ 2018ರ ಏಷ್ಯನ್ ಗೇಮ್ಸ್‌ನಲ್ಲಿ ಇದೇ ನಿಯಮದ ಕಾರಣದಿಂದಾಗಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ ಹೊರತಾಗಿ ಈ ಬಾರಿಯೂ ಭಾರತದ ಫುಟ್ಬಾಲ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವುದೆ ಹೊರಗುಳಿಯುವ ಸಾಧ್ಯತೆಯೇ ಹೆಚ್ಚಿತ್ತು. ಆದರೆ ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿರುವ ಕಾರಣ ಮತ್ತೆ ಭಾರತ ಫುಟ್ಬಾಲ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದೆ.
ನಿಯಮದಲ್ಲೇನಿದೆ?
ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ತಂಡ ಕ್ರೀಡೆಗಳು ಏಷ್ಯಾದಲ್ಲಿ ಟಾಪ್ 8ರಲ್ಲಿ ಸ್ಥಾನವನ್ನು ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ಹೊಂದಿದೆ. ಆದರೆ ಭಾರತದ ಫುಟ್ಬಾಲ್ ತಂಡ ಏಷ್ಯಾದಲ್ಲಿ ಪ್ರಸ್ತುತ 18ನೇ ಸ್ಥಾನದಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತ SAFF ಚಾಂಪೊಯನ್‌ಶಿಪ್ ಹಾಗೂ ಜೂನ್ ಜುಲೈನಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಎನಿಸಿಕೊಳ್ಳುವ ಮೂಲಕ ಸ್ಥಿರ ಪ್ರದರ್ಶನ ನೀಡಿ ಗಮನಸೆಳೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications