For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ ಆರಂಭ: ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಶೂಟರ್‌ಗಳು

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದೆ. 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಪುರುಷರ ತಂಡ ವಿಶ್ವದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದೆ.

ರುದ್ರಂಕ್ಷ್ ಬಾಳಾಸಾಹೇಬ್ ಪಾಟೀಲ್, ದಿವ್ಯಾಂಶ್ ಸಿಂಗ್ ಪನ್ವಾರ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನು ಒಳಗೊಂಡ ತಂಡವು ಭಾರತದ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಅಲ್ಲದೆ ಈ ಸಂದರ್ಭದಲ್ಲಿ ಭಾರತದ ಪುರುಷರ ತಂಡವಿಶ್ವದಾಖಲೆಯನ್ನು ಕೂಡ ಮುರಿಯುವಲ್ಲಿ ಯಶಸ್ವಿಯಾಗಿದೆ.

Asian Games 2023: Indian mens Shooting team win first Gold for India: broken world record

ಭಾರತದ ಪುರುಷರ ತಂಡ ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ಒಟ್ಟು 1893.7 ಅಂಕಗಳನ್ನು ಗಳಿಸಿದರು. ಇದು ಇದೇ ವರ್ಷದ ಆರಂಭದಲ್ಲಿ ಬಾಕು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾ ನಿರ್ಮಿಸಿದ ಹಿಂದಿನ ವಿಶ್ವ ದಾಖಲೆಯನ್ನು ಭಗ್ನಗೊಳಿಸಿತು. ಇನ್ನು ದಕ್ಷಿಣ ಕೊರಿಯಾ 1890.1 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡರೆ ಚೀನಾ ಒಟ್ಟು 1888.2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಅರ್ಹತೆಯಲ್ಲಿ ಮೂರನೇ ಸ್ಥಾನ ಪಡೆದಿದ್ದ ರುದ್ರಂಕ್ಷ್ ತಂಡಕ್ಕೆ 631.6 ಅಂಕ ಗಳಿಸಿದ್ದರು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಕೂಡ 631.6 ಅಂಕ ಗಳಿಸಿದ್ದರು. ಇನ್ನು ದಿವ್ಯಾಂಶ್ 629.6 ಅಂಕ ಗಳಿಸಿದರು.

ಇನ್ನು ಟೀಮ್ ಈವೆಂಟ್‌ನಲ್ಲಿ ಭಾರತವು ವಿಶ್ವದಾಖಲೆಯೊಂದಿಗೆ ಚಿನ್ನದ ಪದಕವನ್ನು ಕೊರಳಿಗೇರಿಸಿದ್ದು ಮಾತ್ರವಲ್ಲದೆ ಎಲ್ಲಾ ಮೂವರು ಶೂಟರ್‌ಗಳು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಟಾಪ್ -8ರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ವೈಯಕ್ತಕ ವಿಭಾಗದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಏಷ್ಯನ್ ಗೇಮ್ಸ್ ನಿಯಮಗಳ ಪ್ರಕಾರ ಪ್ರತಿ ದೇಶದಿಂದ ಇಬ್ಬರಿಗೆ ಮಾತ್ರವೇ ಫೈನಲ್‌ಗೆ ಅರ್ಹತೆ ಪಡೆಯಬಹುದು. ಹೀಗಾಗಿ ರುದ್ರಾಂಕ್ಷ್ ಮತ್ತು ಐಶ್ವರಿ ಮಾತ್ರವೇ ಫೈನಲ್‌ಗೆ ಮುನ್ನಡೆದಿದ್ದು ದಿವ್ಯಾಂಶ್ ಈ ಅವಕಾಶ ಕಳೆದುಕೊಂಡಿದ್ದಾರೆ.

ಇನ್ನು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಈ ಮೂಲಕ ಭಾರತ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು ಮಹತ್ವ ಪಡೆದುಕೊಂಡಿದೆ. ಅಲ್ಲದೆ ಈ ಕ್ರೀಡಾಕೂಟದಲ್ಲಿ ಭಾರತದ ಪ್ರದರ್ಶನಕ್ಕೆ ಹೊರ ಹುರುಪು ಮೂಡಿಸುವಂತೆ ಮಾಡಿದೆ. ಭಾರತವು ಮೊದಲ ದಿನ ಮೂರು ಬೆಳ್ಳಿ ಪದಕಗಳು ಮತ್ತು ಎರಡು ಕಂಚಿನ ಪದಕಗಳೊಂದಿಗೆ ಐದು ಪದಕಗಳನ್ನು ಗೆದ್ದುಕೊಂಡಿತ್ತು. ಇದೀಗ ಈ ಪಟ್ಟಿಗೆ ಚಿನ್ನದ ಪದಕ ಕೂಡ ಸೇರ್ಪಡೆಯಾಗಿದೆ

ಇನ್ನು ಭಾರತದ ಮಹಿಳಾ 10 ಮೀಟರ್ ಏರ್ ರೈಫಲ್ ತಂಡ ಕೂಡ ಅತ್ಯುತ್ತಮ ಸಾಧನೆ ಮಾಡಿ ಹೆಮ್ಮೆ ಪಡುವಂತೆ ಮಾಡಿದೆ. ಆಶಿ ಚೌಕ್ಸಿ, ಮೆಹುಲಿ ಘೋಷ್ ಮತ್ತು ರಮಿತಾ ಜಿಂದಾಲ್ ಒಳಗೊಂಡ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ 2023ರ ಹ್ಯಾಂಗ್‌ಝೌನಲ್ಲಿ ಶೂಟಿಂಗ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿತ್ತು

Story first published: Monday, September 25, 2023, 8:45 [IST]
Other articles published on Sep 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+