For Quick Alerts
ALLOW NOTIFICATIONS  
For Daily Alerts

Asian Games: ರೋಯಿಂಗ್‌ನಲ್ಲಿ ಭಾರತೀಯರ ಅಬ್ಬರ: ಗೆದ್ದ ಪದಕಗಳೆಷ್ಟು ಗೊತ್ತಾ? ಪದಕಕ್ಕೆ ಕೊರಳೊಡ್ಡಿದವರ ಪಟ್ಟಿ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ರೋಯಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದೆ. ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ ರೋಯಿಂಗ್ ವಿಭಾಗ ಈಗಾಗಲೇ 5 ಪದಕಗಳನ್ನು ಗೆದ್ದುಕೊಂಡಿದೆ. ಇದು 2018ರಲ್ಲಿ ನಡೆದ ಕ್ರೀಡಾಕೂಟಕ್ಕಿಂತ ಎರಡು ಹೆಚ್ಚು ಪದಕಗಳಾಗಿದೆ. ಅದ್ಭುತ ಪ್ರದರ್ಶನ ನೀಡಿರುವ ಭಾರತದ ರೋವರ್‌ಗಳು ಇಡೀ ದೇಶವೇ ಹೆಮ್ಮೆ ಪಡುವಂಥಾ ಪ್ರದರ್ಶನ ನೀಡಿದ್ದಾರೆ.

ಈ ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದುಕೊಂಡಿದ್ದ ಸುಖ್‌ಮೀತ್ ಸಿಂಗ್ ಸೇರಿದಂತೆ ಬಲಿಷ್ಠ ರೋಯಿಂಗ್ ಪಡೆಯನ್ನು ಭಾರತ ಹೊಂದಿದೆ. ಹೀಗಾಗಿಯೇ ಭಾರತದ ಪುರುಷರ ರೋಯಿಂಗ್‌ನಲ್ಲಿ ಎಲ್ಲಾ ವಿಭಾಗದಲ್ಲಿಯೂ ಭಾರತ ಪದಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಮಹಿಳೆಯ ರೋಯಿಂಗ್ ತಂಡದಿಂದ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಮಹಿಳೆಯ ವಿಭಾಗದಲ್ಲಿ ಒಂದು ಪದಕವನ್ನು ಕುಡ ಭಾರತ ಗೆಲ್ಲಲು ಸಾಧ್ಯವಾಗಲಿಲ್ಲ.

Asian Games 2023: Indian Rowing Contingent Clinches 5 Medals: Know the complete list

ರೋಯಿಂಗ್‌ನಲ್ಲಿ ಭಾರತ 5 ಪದಕಗಳನ್ನು ಗೆದ್ದುಕೊಂಡಿದ್ದು ಇದರಲ್ಲಿ 2 ಬೆಳ್ಳಿ ಹಾಗೂ 3 ಕಂಚಿನ ಪದಕಗಳಾಗಿದೆ. ಲೈಟ್‌ವೈಟ್ ಡಬಲ್ ಸ್ಕಲ್ ವಿಭಾಗದಲ್ಲಿ ಭಾರತ ಕಳೆದ ಬಾರಿ ಕಂಚಿನ ಪದಕ ಗೆದ್ದಿದ್ದರೆ ಈ ಬಾರಿ ಬೆಳ್ಳಿ ಗೆದ್ದುಕೊಂಡಿದೆ. ಅಲ್ಲದೆ ಮೆನ್ಸ್ 4, ಮೆನ್ಸ್ 8 ಹಾಗೂ ಮೆನ್ಸ್ ಪೇರ್ ವಿಭಾಗದಲ್ಲಿ ಭಾರತ ಪದಕವನ್ನು ಗೆದ್ದುಕೊಂಡಿದೆ.

ಇನ್ನು ಕಳೆದ ಆವೃತ್ತಿಯಲ್ಲಿ ಕ್ವಾಡ್ರುಪಲ್ ಸ್ಕಲ್ಸ್‌ನಲ್ಲಿ ಕಳೆದ ಆವೃತ್ತಿಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಆದರೆ ಸಿಂಗಲ್ ಸ್ಕಲ್ ವಿಭಾಗದಲ್ಲಿ ಭಾರತಕ್ಕೆ ಈ ಬಾರಿ ಯಾವುದೇ ಪದಕ ದೊರೆತಿಲ್ಲ.

ಪುರುಷರ ಕ್ವಾಡ್ರುಪಲ್ ಸ್ಕಲ್ಸ್

ಪದಕ: ಕಂಚು
ಸದಸ್ಯರು: ಸತ್ನಾಮ್ ಸಿಂಗ್, ಸುಖ್ಮೀತ್ ಸಿಂಗ್, ಜಾಕರ್ ಖಾನ್, ಪರ್ಮಿಂದರ್ ಸಿಂಗ್
ಸಮಯ: 6:08:61 ನಿಮಿಷಗಳು
ಇತರ ಪದಕ ವಿಜೇತ ತಂಡ
ಉಜ್ಬೇಕಿಸ್ತಾನ(ಬೆಳ್ಳಿ), ಚೀನಾ (ಚಿನ್ನ)

ಮೆನ್ಸ್ 4 ವಿಭಾಗ

ಪದಕ: ಕಂಚು
ಸದಸ್ಯರು: ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನಿತ್ ಕುಮಾರ್, ಆಶಿಶ್
ಸಮಯ: 6:08:81 ನಿಮಿಷ
ಇತರ ಪದಕ ವಿಜೇತ ತಂಡ: ಚೀನಾ (ಬೆಳ್ಳಿ), ಉಜ್ಬೇಕಿಸ್ತಾನ್ (ಚಿನ್ನ)

ಮೆನ್ಸ್ 8 ವಿಭಾಗ

ಪದಕ: ಬೆಳ್ಳಿ
ಸದಸ್ಯರು: ನೀರಜ್, ನರೇಶ್ ಕಲ್ವಾನಿಯಾ, ಚರಂಜಿತ್ ಸಿಂಗ್, ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನಿತ್ ಕುಮಾರ್, ಆಶಿಶ್, ಉತ್ತಮ್ ಪಾಂಡೆ
ಸಮಯ: 5:43:01
ಇತರ ಪದಕ ವಿಜೇತರು: ಇಂಡೋನೇಷ್ಯಾ (ಕಂಚು), ಚೀನಾ (ಚಿನ್ನ)

ಮೆನ್ಸ್ ಪೇರ್

ಪದಕ: ಕಂಚು
ಸದಸ್ಯರು: ಬಾಬು ಲಾಲ್ ಯಾದವ್, ಲೇಖ್ ರಾಮ್
ಸಮಯ: 6:50:41 ನಿಮಿಷ
ಇತರೆ ವಿಜೇತರು: ಉಜ್ಬೇಕಿಸ್ತಾನ್ (ಬೆಳ್ಳಿ), ಹಾಂಗ್ ಕಾಂಗ್ ಮತ್ತು ಚೀನಾ (ಚಿನ್ನ)

ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್

ಪದಕ: ಬೆಳ್ಳಿ
ಸದಸ್ಯರು: ಅರವಿಂದ್ ಸಿಂಗ್, ಅರ್ಜುನ್ ಲಾಲ್
ಸಮಯ: 6:28:18
ಇತರೆ ವಿಜೇತರು: ಉಜ್ಬೇಕಿಸ್ತಾನ್ (ಕಂಚು), ಚೀನಾ (ಚಿನ್ನ)

Story first published: Monday, September 25, 2023, 16:18 [IST]
Other articles published on Sep 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+