Asian Games: ಐತಿಹಾಸಿಕ ಚಿನ್ನದ ಪದಕಕ್ಕೆ ಗುರಿಯಿಟ್ಟ ಸಿಫ್ಟ್ ಸಮ್ರಾ: ಮುಂದುವರಿದ ಶೂಟರ್‌ಗಳ ಕಮಾಲ್
ಏಷ್ಯನ್ ಗೇಮ್ಸ್‌ನಲ್ಲಿ ಬುಧವಾರ ಭಾರತದ ಪದಕ ಬೇಟೆ ಭರ್ಜರಿಯಾಗಿ ಮುಂದುವರಿದಿದೆ. ಮಹಿಳೆಯರ 50 ಮೀ. ರೈಫಲ್ 3P ಫೈನಲ್‌ನಲ್ಲಿ ಭಾರತದ ಇಬ್ಬರು ಶೂಟರ್‌ಗಳು ಪದಕ ಗೆದ್ದಿದ್ದಾರೆ. ಸಿಫ್ಟ್ ಕೌರ್ ಸಮ್ರಾ ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರೆ ಆಶೀ ಚೌಕ್ಸೀ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಸಿಫ್ಟ್ ಕೌರ್ ಸಮ್ರಾ ಈ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡ ಸಾಧನೆ ಮಾಡಿದಂತಾಗಿದೆ.
ಸಮ್ರಾ 469.6 ಅಂಕಗಳನ್ನು ಗಳಿಸಿ ಈ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮತ್ತೊಂದೆಡೆ ಚೌಕ್ಸಿ 451.9 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡರು. ಒಂದು ಹಂತದಲ್ಲಿ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಆಶೀ ಚೌಕ್ಸಿ ನಂತರ ಎರಡನೇ ಸ್ಥಾನಕ್ಕೆ ಏರಿದರು. ಆದರೆ ಚೀನಾದ ಕಿಯೊಂಗ್ಯು 462.3 ಪಾಯಿಂಟ್‌ಗಳೊಂದಿಗೆ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದರು. ಕಿಯೊಂಗ್ಯು ಅಂತಿಮವಾಗಿ ಎರಡನೇ ಸ್ಥಾನ ಗಳಿಸಿದ ನಂತರ ಬೆಳ್ಳಿ ಪದಕವನ್ನು ಗೆದ್ದುಕೊಂಡರು.

ಇದಕ್ಕೂ ಮುನ್ನ ಮಹಿಳೆಯರ 50 ಮೀಟರ್ ರೈಫಲ್ 3ಪಿ ಟೀಮ್ ಈವೆಂಟ್ ಅನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದರು ಚೌಕ್ಸಿ ಮತ್ತು ಸಮ್ರಾ. ಮಾನಿನಿ ಕೌಶಿಕ್ ಕೂಡ ತಂಡದ ಭಾಗವಾಗಿದ್ದರು. ಆದರೆ ಅವರು ವೈಯಕ್ತಿಕ ವಿಭಾಗದಲ್ಲಿ 18ನೇ ಸ್ಥಾನ ಪಡೆಯುವ ಮೂಲಕ ನಿರಾಸೆ ಮೂಡಿಸಿದರು. ತಂಡ ಸ್ಪರ್ಧೆಯಲ್ಲಿ ಭಾರತ ಒಟ್ಟು 1764 ಸ್ಕೋರ್ ಹೊಂದಿದ್ದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿತ್ತು. ಚಿನ್ನದ ಪದಕ ಗೆದ್ದ ಚೀನಾಕ್ಕಿಂತ 9 ಅಂಕಗಳನ್ನು ಭಾರತ ಹಿಂದಿತ್ತು. ಇನ್ನು ರಿಪಬ್ಲಿಕ್ ಆಫ್ ಕೊರಿಯಾ 1756 ಅಂಕಗಳೊಂದಿಗೆ ಕಂಚು ಗೆದ್ದುಕೊಂಡಿತು.
ಇನ್ನು ಮತ್ತೊಂದೆಡೆ ಮಹಿಳೆಯದ 25 ಮೀಟರ್ ತಂಡ ವಿಭಾಗದಲ್ಲಿ ಭಾರತ ಈ ಚಿನ್ನದ ಪದಕ ಗೆದ್ದುಕೊಂಡಿದೆ. ಮನು ಭಾಕರ್, ಇಶಾ ಸಿಂಗ್, ಮತ್ತು ರಿದಮ್ ಸಂಗ್ವಾನ್ ಅವರನ್ನು ಒಳಗೊಂಡ ಭಾರತ ತಂಡ ಈ ಸಾಧನೆ ಮಾಡಿತು. ಭಾರತವು ಒಟ್ಟು 1759 ಅಂಕಗಳನ್ನು ಗಳಿಸಿ ಚಿನ್ದ ಪದಕವನ್ನು ಕೊರಳಿಗೇರಿಸಿಕೊಂಡಿದೆ. 1756 ಅಂಕಗಳನ್ನು ಗಳಿಸಿದ ಚೀನಾ ಭಾರೀ ಪೈಪೋಟಿ ನಡೆಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ರಿಪಬ್ಲಿಕ್ ಆಫ್ ಕೊರಿಯಾ 1742 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಅರ್ಹತಾ ಸುತ್ತಿನಲ್ಲಿ ಮನು 590 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿವನ್ನು ಪಡೆದುಕೊಂಡಿದ್ದರು.
ಈ ಮೂಲಕ ಪ್ರಸ್ತುತ ನಡೆಯುತ್ತಿರುವ ಏಷ್ಯಾಡ್‌ನಲ್ಲಿ ಭಾರತದ ಪ್ರದರ್ಶನ ಗಮನಾರ್ಹವಾಗಿದ್ದು ಐದು ಚಿನ್ನ, ಐದು ಬೆಳ್ಳಿ ಮತ್ತು 10 ಕಂಚಿನ ಪದಕಗಳನ್ನು ಒಳಗೊಂಡಿದ್ದು ಒಟ್ಟು 20 ಪದಕಗಳು ಭಾರತದ ಖಾತೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications