ಏಷ್ಯನ್ ಗೇಮ್ಸ್ 2018: ಗಾಲ್ಫ್ ಸ್ಪರ್ಧೆಯಲ್ಲಿ ಭಾರತಕ್ಕೆ ಆರಂಭಿಕ ಮುನ್ನಡೆ

ಜಕಾರ್ತಾ, ಆಗಸ್ಟ್ 23: ಏಷ್ಯನ್ ಗೇಮ್ಸ್ ಮೊದಲ ಸುತ್ತಿನ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಆದಿಲ್ ಬೇಡಿ ಅವರು ಬೋಗಿ-ಫ್ರೀ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ತಂಡವಿಭಾಗದಲ್ಲೂ ಭಾರತ ದ್ವಿತೀಯ ಸ್ಥಾನ ಗಳಿಸಿದ್ದು, ದೇಸಿ ಗಾಲ್ಫ್ ತಂಡಕ್ಕೆ ಆರಂಭಿಕ ಮುನ್ನಡೆ ಲಭಿಸಿದಂತಾಗಿದೆ.
ಬೇಡಿ ಅವರು ಒಟ್ಟು 69 ಹೊಡೆತಗಳಲ್ಲಿ ಆಟ ಮುಗಿಸುವುದರೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡರು. ದ್ವಿತೀಯ ಸ್ಥಾನಿಗ ಆದಿಲ್ ಅವರೊಂದಿಗೆ ಇಂಡೋನೇಷ್ಯಾದ ನರಜೆ ಎಮರಾಲ್ಡ್ ರಮಧನ್ ಪುತ್ರ, ಮಲೇಷ್ಯಾದ ಎರ್ವಿನ್ ಚಾಂಗ್ ಮತ್ತು ಕೊರಿಯಾದ ಚೋ ಹೋಯ್-ಯುವ ಅವರೂ ಸ್ಥಾನ ಹಂಚಿಕೊಂಡಿದ್ದಾರೆ. ಈ ನಾಲ್ವರೂ 69 ಹೊಡೆತಗಳಲ್ಲಿ ಆಟ ಮುಗಿಸಿದರು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಮೊದಲಿಗನಾಗಿ ಆಟ ಮುಗಿಸಿದ ಜಪಾನ್ ನ ಕೀತಾ ನಕಾಜಿಮಾ ಅವರಿಗೆ ಹೋಲಿಸಿದರೆ ದ್ವಿತೀಯ ಸ್ಥಾನಕ್ಕಾಗಿ ಆದಿಲ್ ತೆಗೆದುಕೊಂಡಿದ್ದು ಒಂದು ಹೆಚ್ಚುವರಿ ಹೊಡೆತ ಮಾತ್ರ. ನಕಾಜಿಮಾ ಅವರು 68 ಹೊಡೆತಗಳಲ್ಲಿ ಆಟ ಮುಗಿಸಿದರು. ನಕಾಜಿಮಾ ಅವರು ಆಸ್ಟ್ರೇಲಿಯಾನ್ ಅಮೇಚೂರ್ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡವರು.
ಭಾರತದ ಪ್ರದರ್ಶನವನ್ನು ತಂಡವಿಭಾಗದಲ್ಲಿ ಪರಿಗಣಿಸಿದಾಗ ದುಬೈ ಮೂಲದ ರಿಯಾನ್ ಥೋಮಸ್ (71 ಹೊಡೆತ), ಕ್ಷಿತಿಜ್ ನವೀದ್ (73 ಹೊಡೆತ) ಅವರಿಂದ ಭಾರತ ದ್ವಿತೀಯ ಸ್ಥಾನ (ಒಟ್ಟು 213) ಗಳಿಸಿತು. ತಂಡ ವಿಭಾಗದಲ್ಲಿ ಮುಂದಿರುವ ಜಪಾನ್ ಒಟ್ಟು 208 (68+69+71) ಹೊಡೆತಗಳಲ್ಲಿ ಆಟ ಮುಗಿಸಿತು. 13 ಕುಳಿಗಳ ಪಂದ್ಯ ಇದಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications