ಏಷ್ಯನ್ ಗೇಮ್ಸ್ 2018: ಬ್ರಿಡ್ಜ್ ನಲ್ಲಿ ಪುರುಷರು, ಮಿಶ್ರ ತಂಡಕ್ಕೆ ಕಂಚು

ಜಕಾರ್ತಾ, ಆಗಸ್ಟ್ 26: ಏಷ್ಯಾನ್ ಗೇಮ್ಸ್ ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡಕ್ಕೆ ಮತ್ತು ಮಿಶ್ರ ತಂಡಕ್ಕೆ ಕಂಚಿನ ಗೌರವ ಲಭಿಸಿದೆ. ಭಾನುವಾರ ನಡೆದ ಸೆಮಿಫೈನಲ್ ನಲ್ಲಿ ಭಾರತ ಸೋತ ಕಾರಣ ಕಂಚಿಗೆ ತೃಪ್ತಿ ಪಟ್ಟುಕೊಳ್ಳುವಂತಾಯ್ತು. ಅಂತೂ ಇದೇ ಮೊಲದ ಬಾರಿಗೆ ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು ಒಲಿದಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಆಗಸ್ಟ್ 26ರ ಭಾನುವಾರ ನಡೆದ ಪುರುಷರ ಸೆಮಿಫೈನಲ್ ನಲ್ಲಿ ಜೆ ಶಿವದಾಸಾನಿ, ಆರ್ ತಿವಾರಿ, ಎ ಖಾರೆ, ಆರ್ ತೊಲಾನಿ, ಡಿ ಮಾಜುಮ್ದಾರ್ ಅವರಿದ್ದ ತಂಡ ಸೋಲನುಭವಿಸಿತು. ಹೀಗಾಗಿ ಭಾರತಕ್ಕೆ ಕಂಚಿನ ಪದಕ ಲಭಿಸಿದೆ.
ಭಾನುವಾರವೇ ನಡೆದ ಬ್ರಿಡ್ಜ್ ಮಿಶ್ರ ತಂಡ ಸ್ಪರ್ಧೆಯಲ್ಲೂ ಭಾರತ ಕಂಚು ಗೆದ್ದಿದೆ. ಮಿಶ್ರ ತಂಡದಲ್ಲಿ ಭಾರತ ಪರ ಕಿರಣ್ ನದಾರ್, ಹೇಮಾ ಡಿಯೋರಾ, ಹಿಮಾನಿ ಖಾಂದೇಲ್ವಾಲ್, ಬಚೀರಾಜಿ ಸತ್ಯನಾರಾಯಣ, ಗೋಪೀನಾತ್ ಮನ್ನ ಮತ್ತು ರಾಜೀವ್ ಖಾಂದೇಲ್ವಾಲ್ ಸ್ಪರ್ಧಿಸಿದ್ದರು.
Story first published: Sunday, August 26, 2018, 19:44 [IST]
Other articles published on Aug 26, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications