ಏಷ್ಯನ್ ಗೇಮ್ಸ್ ಬಾಕ್ಸಿಂಗ್: 75 ಕೆಜಿ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ ಲೊವ್ಲಿನಾ; ಒಲಿಂಪಿಕ್ಸ್‌ಗೆ ಅರ್ಹತೆ
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಸ್ಟಾರ್ ಬಾಕ್ಸರ್ ಲೊವ್ಲಿನಾ ಬೊರ್ಗೋಹೈನ್ ಮಹಿಳೆಯರ 75 ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಏಷ್ಯನ್ ಗೇಮ್ಸ್‌ನ ಫೈನಲ್‌ಗೆ ಪ್ರವೇಶ ಪಡೆಯುವುದರ ಜೊತೆಗೆ ಲೊವ್ಲಿನಾ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಒಲಿಂಪಿಕ್ ಪದಕ ವಿಜೇತೆ ಮತ್ತು ವಿಶ್ವ ಚಾಂಪಿಯನ್ ಲೊವ್ಲಿನಾ ಬೊರ್ಗೊಹೈನ್ ಅವರು ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಬೈಸನ್ ಮನೀಕಾನ್ ಅವರನ್ನು ಮಣಿಸಿದ್ದಾರೆ. ಸರ್ವಾನುಮತದ ನಿರ್ಣಯದೊಂದಿಗೆ ಎದುರಾಳಿಯನ್ನು ಮಣಿಸಿದ ಲೊವ್ಲಿನಾ ಚಿನ್ನದ ಪದಕಕ್ಕಾಗಿ ನಡೆಯುವ ಸೆಣೆಸಾಟಕ್ಕಾಗಿ ಪಂದ್ಯದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಬೊರ್ಗೊಹೈನ್ ತನ್ನ ಎದುರಾಳಿಯ ಆಕ್ರಮಣದಿಂದ ದೂರವಿರಲು ತನ್ನ ಎತ್ತರದ ಪ್ರಯೋಜನವನ್ನು ಬಳಸಿಕೊಂಡರು. ಜೊತೆಗೆ ಕೆಲ ಪರಿಣಾಮಕಾರಿ ಕೌಂಟರ್‌ಹೂಕ್‌ಗಳನ್ನು ಬಳಸಿ ಎದುರಾಳಿಯನ್ನು ಹಿಮ್ಮೆಟ್ಟಿಸಿದ್ದಾರೆ. ಇನ್ನು ಭಾರತದ ಬಾಕ್ಸರ್ ಪಂದ್ಯದುದ್ದಕ್ಕೂ ರಕ್ಷಣಾತ್ಮಕ ಶಿಸ್ತನ್ನು ಕಾಪಾಡಿಕೊಂಡಿದ್ದು ಗೆದ್ದು ಬೀಗಿದ್ದಾರೆ. ಈ ಮೂಲಕ ಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಬಾಕ್ಸಿಂಗ್‌ಗೆ ಏಷ್ಯನ್ ಗೇಮ್ಸ್ ಅರ್ಹತಾ ಪಂದ್ಯವಾಗಿದೆ. ಪುರುಷರ ವಿಭಾಗದಲ್ಲಿ ಎಲ್ಲಾ ಏಳು ತೂಕ ವಿಭಾಗದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತರು ಪ್ಯಾರಿಸ್ 2024 ಗೆ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಇನ್ನು ಮಹಿಳೆಯರ ವಿಭಾಗಗಳಲ್ಲಿ 66 ಕೆಜಿ ಮತ್ತು 75 ಕೆಜಿ ಹೊರತುಪಡಿಸಿ ಉಳಿದ ಎಲ್ಲಾ ವಿಭಾಗಗಳಲ್ಲಿಯೂ 4 ಕೋಟಾಗಳು ಲಭ್ಯವಿದೆ. ಆದರೆ ಈ ಎರಡು ವಿಭಾಗಗಳಲ್ಲಿ ಪುರುಷರ ವಿಭಾಗದಂತೆಯೇ 2 ಕೋಟಾಗಳು ಮಾತ್ರವೇ ಇದೆ.
ಇನ್ನು ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಈ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ನಿಖತ್ ಜರೀನ್, ಪ್ರೀತಿ ಪವಾರ್, ಪರ್ವೀನ್ ಹೂಡಾ ಮತ್ತು ಲೊವ್ಲಿನಾ ಬೊರ್ಗೊಹೈನ್ ಅವರು ಈಗಾಗಲೇ ಪ್ಯಾರಿಸ್ 2024ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ 19 ವರ್ಷದ ಪ್ರೀತಿ ಪವಾರ್ ತನ್ನ 54 ಕೆಜಿ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೀನಾದ ಚಾಂಗ್ ಯುವಾನ್ ವಿರುದ್ಧ ಸರ್ವಾನುಮತದ ನಿರ್ಧಾರದಿಂದ ಸೋಲು ಕಂಡಿದ್ದಾರೆ. ತನ್ನ ಮೊದಲ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಪ್ರೀತಿ ಪವಾರ್ ಸೆಮಿಫೈನಲ್ ತಲುಪುವ ಮೂಲಕ ಈಗಾಗಲೇ ಕಂಚಿನ ಪದಕ ಮತ್ತು ಒಲಿಂಪಿಕ್ ಕೋಟಾವನ್ನು ಖಚಿತಪಡಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications