ಏಷ್ಯಾಡ್, 6ನೇ ದಿನ ಮುಕ್ತಾಯ: ಶೂಟಿಂಗ್‌ನಲ್ಲಿ ಮುಂದುವರಿದ ಪದಕ ಬೇಟೆ; ಒಲಿಂಪಿಕ್ಸ್ ಅರ್ಹತೆ ಪಡೆದ ನಿಖತ್ ಜರೀನ್
ಸೆಪ್ಟೆಂಬರ್ 29 ರಂದು ಕೂಡ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳಿಂದ ಗಮನಾರ್ಹ ಪ್ರದರ್ಶನ ಬಂದಿದೆ. ಅದರಲ್ಲೂ ಶೂಟರ್‌ಗಳ ಪದಕ ಬೇಟೆ ಮುಂದಿವರಿದಿದ್ದು ಹ್ಯಾಂಗ್‌ಝೌನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವೈಯಕ್ತಿಕ ಈವೆಂಟ್ ಮತ್ತು 50 ಮೀ ರೈಫಲ್ 3 ಪೊಸಿಷನ್ಸ್ ಟೀಮ್ ಮೆನ್ ನಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡಿತು. ಈ ಮೂಲಕ ಈ ದಿನವೂ ಭಾರತ ಯಶಸ್ಸು ಕಂಡಿದೆ.
ಪಾಲಕ್ ಮತ್ತು ಇಶಾ ಸಿಂಗ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ 1-2 ಅಂತರದಿಂದ ಅಂತ್ಯ ಮುಗಿಸಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಗಮನಾರ್ಹ ದಿನ ಎನಿಸಿಕೊಂಡಿತು. ಅರ್ಹತಾ ಸುತ್ತಿನಲ್ಲಿ ಚೀನಾಕ್ಕಿಂತ ಹಿಂದಿದ್ದ ಕಾರಣ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿದೆ.

ಮತ್ತೊಂದೆಡೆ ಶುಕ್ರವಾರ ನಡೆದ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬೆಳ್ಳಿ ಗೆದ್ದಿದ್ದಾರೆ. ಇದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಶೂಟಿಂಗ್‌ನಲ್ಲಿ 22 ವರ್ಷದ ಶೂಟರ್‌ನ 4 ನೇ ಪದಕವಾಗಿದೆ. ಅವರು 10 ಮೀಟರ್ ಏರ್ ರೈಫಲ್ ಈವೆಂಟ್‌ನಲ್ಲಿ ಕಂಚು ಮತ್ತು ಈವೆಂಟ್‌ನಲ್ಲಿ ತಂಡದೊಂದಿಗೆ ಚಿನ್ನ ಗೆದ್ದಿದ್ದರು.
ಶುಕ್ರವಾರ ಬೆಳ್ಳಿ ಗೆದ್ದಿದ್ದ 50 ಮೀಟರ್ ರೈಫಲ್ 3 ಪೊಸಿಷನ್ಸ್ ತಂಡದಲ್ಲಿ ಕೂಡ ಐಶ್ವರಿ ಇದ್ದರು. ಭಾರತದ ಶೂಟರ್‌ಗಳು ಚೀನಾದ ಹ್ಯಾಂಗ್‌ಝೌನಲ್ಲಿ ಆರು ಚಿನ್ನ ಸೇರಿದಂತೆ ಒಟ್ಟು 17 ಪದಕಗಳನ್ನು ಗಳಿಸುವ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಶೂಟಿಂಗ್‌ನಲ್ಲಿ ಭಾರತದ ಶೂಟಿಂಗ್ ತಂಡದ ಅತ್ಯುತ್ತಮ ಪದಕ ಸಾಧನೆಯಾಗಿದೆ. 2006 ರಲ್ಲಿ ದೋಹಾ ಗೇಮ್ಸ್‌ನಲ್ಲಿ ಶೂಟರ್‌ಗಳು 14 ಪದಕಗಳನ್ನು ಗೆದ್ದುಕೊಂಡಿದ್ದು ಈ ಹಿಂದಿನ ದಾಖಲೆಯಾಗಿತ್ತು.
24 ವರ್ಷದ ಕಿರಣ್ ಬಲಿಯಾನ್ ಸೆಪ್ಟೆಂಬರ್ 29 ಶುಕ್ರವಾರದಂದು ಹ್ಯಾಂಗ್‌ಝೌನಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಿರಣ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದು ಈ ಮೂಲಕ ಏಷ್ಯಾದ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ 72 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈ ವಿಭಾಗದಲ್ಲಿ ಭಾರತ ಪದಕವನ್ನು ಗೆಲ್ಲಲು ಕಾರಣವಾದರು. ಕಿರಣ್ ಬಲಿಯಾನ್ ತನ್ನ ವೃತ್ತಿಜೀವನದ ಮೊದಲ ಪ್ರಮುಖ ಪದಕವನ್ನು ಕೊರಳಿಗೇರಿಸಿಕೊಂಡ ಕಿರಣ್ 17.36 ಮೀ ದೂರಕ್ಕೆ ಎಸೆಯುವ ಮೂಲಕ ತಮ್ಮ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಇತ್ತ ಪುರುಷರ ಡಬಲ್ಸ್ ಟೆನಿಸ್‌ನಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ಅವರು ಫೈನಲ್‌ನಲ್ಲಿ ತೈವಾನ್‌ನ ಜೇಸನ್ ಜಂಗ್ ಮತ್ತು ಯು-ಹ್ಸಿಯು ಹ್ಸು ವಿರುದ್ಧ 4-6, 4-6 ಸೆಟ್‌ಗಳಿಂದ ಸೋಲು ಕಂಡ ಕಾರಣ ಬೆಳ್ಳಿ ಪದಕವನ್ನು ಗೆದ್ದುಕೊಂಡಂತಾಗಿದೆ. ಇನ್ನು ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಜೋಡಿ ಮಿಶ್ರ ಡಬಲ್ಸ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ. ಅವರು 6-1, 3-6, 10-4 ಅಂತರದಿಂದ ತೈವಾನ್‌ನ ಯು-ಹಸಿಯು ಹ್ಸು ಮತ್ತು ಹಾವೊ-ಚಿಂಗ್ ಚಾನ್ ಜೋಡಿಯನ್ನು ಸೋಲಿಸಿದರು.
ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಝರೀನ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ತಮ್ಮ ಚೊಚ್ಚಲ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಶುಕ್ರವಾರ ನಡೆದ 50 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಜೋರ್ಡಾನ್‌ನ ಹನಾನ್ ನಾಸರ್ ಅವರ ವಿರುದ್ಧ ಅದ್ಭುತ ಜಯ ಸಾಧಿಸುವ ಮೂಲಕ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತಕ್ಕೆ ಮೊದಲ ಬಾಕ್ಸಿಂಗ್ ಪದಕವನ್ನು ಖಚಿತಪಡಿಸಿದ್ದಾರೆ. ಈವೆಂಟ್‌ನ ಸೆಮಿಫೈನಲ್‌ಗೆ ತಲುಪಲು ಆರ್‌ಎಸ್‌ಸಿ (ರೆಫರಿ ಸ್ಟಾಪ್ಸ್ ಕಾಂಟೆಸ್ಟ್) ಗೆಲುವನ್ನು ಸಾಧಿಸಿ ಎದುರಾಳಿಯನ್ನು ಮಣಿಸಿದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications