ಆರು ಬೆರಳಿನ ಕಾಲಿಗೆ ಸರಿಹೊಂದುವ ಶೂ ಪಡೆದ ಚಿನ್ನದ ಹುಡುಗಿ ಸ್ವಪ್ನಾ

ಬೆಂಗಳೂರು, ಸೆಪ್ಟೆಂಬರ್ 14: ಮಲೇಷಿಯಾದ ಜಖಾರ್ತದಲ್ಲಿ ನಡೆದ ಏಷಿಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದ ಸ್ವಪ್ನಾ ಬರ್ಮನ್ ಅವರ ಬಹುದಿನಗಳ ಬಯಕೆ ಮತ್ತು ಅವಶ್ಯಕತೆಯಾದ ತಮ್ಮ ಪಾದಕ್ಕೆ ತಕ್ಕ ಶೂ ದೊರಕುವ ಕಾಲ ಸನ್ನಿಹಿತವಾಗಿದೆ.
ಹೆಪ್ಟತ್ಲಾನ್‌ನಂತಹ ಅತಿ ಕಠಿಣವಾದ ಕ್ರೀಡೆಯಲ್ಲಿ ಚಿನ್ನ ಗೆದ್ದಿದ್ದ ಸ್ವಪ್ನಾ ಬರ್ಮನ್ ಅವರಿಗೆ ಬಹು ದಿನಗಳಿಂದಲೂ ತಮ್ಮ ಕಾಲಿಗೆ ತಕ್ಕುದಾದ ಶೂ ಇಲ್ಲವೆಂಬ ಚಿಂತೆ ಇತ್ತು. ಅವರ ಕಾಲಿಗೆ ಆರು ಬೆರಳಿದೆ. ಹಾಗಾಗಿ ಸಾಮಾನ್ಯ ಶೂಗಳು ಅವರಿಗೆ ಸರಿಹೊಂದುತ್ತಿರಲಿಲ್ಲ. ಆದರೆ ಈಗ ಆ ಚಿಂತೆ ದೂರವಾಗಲಿದೆ.
ತಮ್ಮ ಕಾಲಿಗೆ ಸರಿಯಾದ ಶೂ ಇಲ್ಲದ ಕಾರಣ ಬರಿಗಾಲಿನಲ್ಲೇ ಓಡಿ ಅಭ್ಯಾಸ ಮಾಡುತ್ತಿದ್ದ ಸ್ವಪ್ನಾ ಬರ್ಮನ್ ಏಷಿಯನ್ ಗೇಮ್ಸ್‌ನಲ್ಲಿ ಪಾದಕ್ಕೆ ಸರಿಹೊಂದದ ಶೂ ಇದ್ದರೂ ಸಹ ನೋವಿನಲ್ಲೇ ಆಡಿ ಚಿನ್ನ ಗೆದ್ದಿದ್ದರು. ಚಿನ್ನ ಗೆದ್ದ ನಂತರ ನನ್ನ ಕಾಲಿಗೆ ಸರಿಹೊಂದುವಂತಹಾ ಶೂ ಯಾರಾದರೂ ಮಾಡಿಕೊಡುತ್ತಾರಾ ಕಾದು ನೋಡುತ್ತೇನೆ ಎಂದು ನಗುತ್ತಲೇ ಹೇಳಿದ್ದರು.
ಆದರೆ ಈಗ ಭಾರತೀಯ ಕ್ರೀಡಾ ಇಲಾಖೆಯು, ವಿಶ್ವವಿಖ್ಯಾತ ಕ್ರೀಡಾ ಸಲಕರಣೆಗಳ ಉತ್ಪಾದಕ ಹಾಗೂ ಮಾರಾಟ ಸಂಸ್ಥೆ ಅಡಿಡಾಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಏಷಿಯನ್ ಗೇಮ್ಸ್‌ನಲ್ಲಿ ವಿಜೇತರಾದ ಎಲ್ಲರಿಗೂ ಅಗತ್ಯ ಕ್ರೀಡಾ ಸಲಕರಣೆಗಳನ್ನು ನೀಡುವಂತೆ ಸೂಚಿಸಿದೆ.

ಹಾಗಾಗಿ ಈಗ ತಮ್ಮ ಆರು ಬೆರಳಿನ ಪಾದಕ್ಕೆ ಸರಿಹೊಂದುವ ಶೂಗಳನ್ನು ಅಡಿಡಾಸ್ ತಯಾರಿಸಿಕೊಡಲಿದೆ ಎಂಬ ಖುಷಿಯಲ್ಲಿ ಸ್ವಪ್ನಾ ಇದ್ದಾರೆ. ಏಷಿಯನ್ ಗೇಮ್ಸ್‌ನ ಹೆಪ್ಟತ್ಲಾನ್‌ನಲ್ಲಿ ಚಿನ್ನ ಗೆದ್ದಿರುವ ಸ್ವಪ್ನಾ ಅಂದು ಪಾದಕ್ಕೆ ಸರಿಹೊಂದದ ಶೂ ಮತ್ತು ವಿಪರೀತ ಹಲ್ಲುನೋವಿಂದ ಬಲಳುತ್ತಿದ್ದರೂ ಆದರೂ ಅತಿ ಕಷ್ಟದ ಹೆಪ್ಟತ್ಲಾನ್‌ನಲ್ಲಿ ಭಾಗವಹಿಸಿ ವಿಜಯಿಯಾಗಿ ಚಿನ್ನದ ಪದಕ ಕೊರಳಿಗೆ ಏರಿಸಿಕೊಂಡಿದ್ದರು.
ಹೆಪ್ಟತ್ಲಾನ್ ಅತ್ಯಂತ ಕಠಿಣವಾದ ಅಥ್ಲೆಟಿಕ್ ಕ್ರೀಡೆ ಎಂದೇ ಪರಿಗಣಿಸಲಾಗುತ್ತದೆ. ಇದು ಓಟ ಮತ್ತು ಶಕ್ತಿ ಸಾಮರ್ಥ್ಯ ಎರಡನ್ನೂ ಒಳಗೊಂಡ ಆಟವಾಗಿದೆ. ಇದರಲ್ಲಿ ಸ್ಪರ್ಧಾಳುವು 100 ಮೀಟರ್ ಅಡೆ-ತಡೆ ಓಟ, ಲಾಂಗ್ ಜಂಪ್, ಹೈಜಂಪ್, ಜಾವೆಲಿನ್ ಎಸೆತ, ಶಾಟ್‌ಪುಟ್ ಎಸೆತ ಮತ್ತು 800 ಮೀಟರ್ ಓಟವನ್ನು ಮಾಡಬೇಕಿರುತ್ತದೆ. ಎಲ್ಲದರಲ್ಲಿಯೂ ಯಾವ ಸ್ಪರ್ಧಿ ಉತ್ತಮವಾಗಿ ಪ್ರದರ್ಶನ ತೋರುತ್ತಾರೋ ಅವರು ವಿಜೇತರಾಗುತ್ತಾರೆ. ಇಂತಹಾ ಕಠಿಣವಾದ ಆಟದಲ್ಲಿ ಸ್ವಪ್ನಾ ಚಿನ್ನ ಗೆದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications