
ಜಕಾರ್ತಾ, ಆಗಸ್ಟ್ 21: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಗುರಿಕಾರರ ಪದಕ ಬೇಟೆ ಮುಂದುವರೆದಿದ್ದು, ಶೂಟರ್ ಸಂಜೀವ್ ರಜಪೂತ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.
ಪುರುಷರ 50 ಮೀಟರ್ 3 ಪೊಸಿಷನ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾಗವಹಿಸಿದ್ದ ಸಂಜೀವ್ ಅವರು ಕೇವಲ 0.4 ಮಿಮೀ ಅಂತರದಲ್ಲಿ ಚಿನ್ನದ ಪದಕ ವಂಚಿತರಾಗಿದ್ದಾರೆ.
ಏಷ್ಯನ್ ಗೇಮ್ಸ್ 2018ರ ವಿಶೇಷಪುಟಕ್ಕಾಗಿ ಕ್ಲಿಕ್ ಮಾಡಿ
ಸಂಜೀವ್ ಅವರ ಪದಕದಿಂದ ಭಾರತದ ಒಟ್ಟು ಪದಕದ ಗಳಿಕೆ 8ಕ್ಕೆ ಏರಿದೆ. ಇಂದೇ 16 ವರ್ಷದ ಸೌರಭ್ ಚೌದರಿ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದರು, ಹಾಗೂ ಅಭೀಶೇಕ್ ವರ್ಮಾ ಕಂಚು ಗೆದ್ದಿದ್ದರು ಇದೀಗ ಸಂಜೀವ್ ಅವರು ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ.
ಏಷ್ಯನ್ ಗೇಮ್ಸ್‌ನ ಮೂರನೇ ದಿನ ಇದಾಗಿದ್ದು, ಭಾರತಕ್ಕೆ ಇನ್ನಷ್ಟು ಪದಕಗಳು ಬರುವ ನಿರೀಕ್ಷೆ ಇದೆ. ಪ್ರಸ್ತುತ ಶೂಟರ್‌ಗಳು ಭಾರತದ ಪರ ಅತಿ ಹೆಚ್ಚು ಪದಕ ಜಯಿಸಿದ್ದಾರೆ.