For Quick Alerts
ALLOW NOTIFICATIONS  
For Daily Alerts

Asian Games: ಪುರುಷರ 4x400 ರಿಲೇಯಲ್ಲಿ ಭಾರತಕ್ಕೆ ಚಿನ್ನ: ಅವಿನಾಶ್ ಸಾಬ್ಲೆ, ಹರ್ಮಿಲನ್ ಬೈನ್‌ಗೆ ಬೆಳ್ಳಿ ಪದಕ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಅದ್ಭುತ ಪ್ರದರ್ಶನ ಇಂದು ಮುಂದುವರಿದಿದೆ. ಭಾರತೀಯ ಪುರುಷರ 4x400 ಮೀ ರಿಲೇ ತಂಡ 3:01.58 ರ ಅದ್ಭುತ ಸಮಯದೊಂದಿಗೆ ಫೈನಲ್‌ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು ಈ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.

ಮುಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಅಜ್ಮಲ್ ಮುಹಮ್ಮದ್ ಮತ್ತು ರಾಜೇಶ್ ರಮೇಶ್ ಅವರನ್ನು ಒಳಗೊಂಡ ಭಾರತ ಪುರುಷರ ರಿಲೇ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತದ ಪದಕದ ಸಾಧನೆಯನ್ನು 81ಕ್ಕೆ ಏರಿಸಿದ್ದಾರೆ. ಈ ಮೂಲಕ ಈ ಕ್ರೀಡಾಕೂಟದ 11ನೇ ದಿನ ಭಾರತ ಪದಕ ಪಟ್ಟಿಯಲ್ಲಿ ಈ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದು ಹೊಸ ದಾಖಲೆ ಬರೆದಿದೆ.

Asian Games: India clinch gold in mens 4x400m relay, Avinash Sable and Harmilan Bains also won medals

ಬುಧವಾರ ಭಾರತ ಪದಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. 18 ಚಿನ್ನದ ಪದಕವನ್ನು ಭಾರತ ಗೆದ್ದಿಕೊಂಡಿದ್ದು 31 ಬೆಳ್ಳಿ ಹಾಗೂ 32 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ತನ್ನ ಈ ಹಿಂದಿನ ಎಲ್ಲಾ ಸಾಧನೆಯನ್ನು ಭಾರತ ಹಿಂದಿಕ್ಕಿದೆ.

ಬುಧವಾರ ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಪುರುಷರ 5000 ಮೀ ಓಟದಲ್ಲಿ ಭಾರತದ ದೂರದ ಓಟಗಾರ ಅವಿನಾಶ್ ಸಾಬ್ಲೆ ತಮ್ಮ ಆಕರ್ಷಕ ಪ್ರದರ್ಶನವನ್ನು ಮುಂದುವರೆಸಿದರು. 29 ವರ್ಷದ ಭಾರತೀಯ ಆಟಗಾರ 13:21.09 ಸೆಕೆಂಡ್‌ನಲ್ಲಿ ಗುರಿ ತಲುಪಿ ಎರಡನೇ ಸ್ಥಾನವನ್ನು ಪಡೆದುಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಬಹ್ರೇನ್‌ನ ಬಿರ್ಹಾನು ಯೆಮಾತಾವ್ ಬಲೆವ್ ಅವರು 13:17:40 ನಿಮಿಷದೊಂದಿಗೆ ಚಿನ್ನವನ್ನು ಗೆದ್ದುಕೊಂಡಿದ್ದು ಬಹ್ರೇನ್‌ನವರೇ ಆದ ದಾವಿತ್ ಫಿಕಾಡು ಅಡ್ಮಾಸು 13:25:63 ನಿಮಿಷದಲ್ಲಿ ಗುರಿ ತಲುಪಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಇನ್ನು ಈ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಭಾರತದ ಅವಿನಾಶ್ ಸಾಬ್ಲೆ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಪದಕವನ್ನು ಗೆದ್ದುಕೊಂಡಂತಾಗಿದೆ. ಇದಕ್ಕೂ ಮುನ್ನ ಅವರು 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಇನ್ನು ಭಾರತದ ಮತ್ತೋರ್ವ ಸ್ಪರ್ಧಿ ಗುಲ್ವೀರ್ ಸಿಂಗ್ 13:29:93 ನಿಮಿಷದಲ್ಲಿ ಗುರಿ ತಲುಪಿ ವೈಯಕ್ತಿ ದಾಖಲೆಯನ್ನು ಉತ್ತಮಗೊಳಿಸಿದರೂ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ಪದಕದಿಂದ ವಂಚಿತರಾದರು.

ಬುಧವಾರ ಇಲ್ಲಿ ನಡೆದ ಈ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಹರ್ಮಿಲನ್ ಬೇನ್ಸ್ ಅವರು ಮಹಿಳೆಯರ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಪಂಜಾಬ್‌ನ 25 ವರ್ಷ ವಯಸ್ಸಿನವರು ಹೆಚ್ಚು ಸ್ಪರ್ಧಾತ್ಮಕ ಓಟದಲ್ಲಿ ಬೆಳ್ಳಿಯನ್ನು ಪಡೆಯಲು 2:03.75 ರ ಆಕರ್ಷಕ ಸಮಯವನ್ನು ಗಳಿಸಿದರು. 2:03.20 ರಲ್ಲಿ ಟೇಪ್ ಸ್ಪರ್ಶಿಸಿದ ಶ್ರೀಲಂಕಾದ ತರುಷಿ ದಿಸ್ಸಾನಾಯಕಾ ಚಿನ್ನ ಪಡೆದರು.

ಕಂಚಿನ ಪದಕವನ್ನು ಚೀನಾದ ಚುನ್ಯು ವಾಂಗ್ ಪಡೆದರು, ಅವರು 2.03:90 ಟೈಮಿಂಗ್‌ನಲ್ಲಿ ಮುಗಿಸಿದರು. ಬೇನ್ಸ್ ಈ ಹಿಂದೆ ಕ್ರೀಡಾಕೂಟದ ಈ ಆವೃತ್ತಿಯಲ್ಲಿ ಮಹಿಳೆಯರ 1500 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದಿದ್ದರು. 800 ಮೀ ಓಟದಲ್ಲಿ ಭಾರತದ ಮತ್ತೊಬ್ಬ ಓಟಗಾರ, ಚಂದಾ 2:05.69 ಸಮಯದೊಂದಿಗೆ ಏಳನೇ ಸ್ಥಾನ ಪಡೆದರು.

ಇನ್ನು ಮತ್ತೊಂದೆಡೆ ಮಹಿಳೆಯರ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಹರ್ಮಿಲನ್ ಬೇನ್ಸ್ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಪಂಜಾಬ್‌ನ 25 ವರ್ಷದ ಯುವ ಸ್ಪರ್ಧಿ ಪೈಪೋಟಿಯ ಸೆಣೆಸಾಟದಲ್ಲಿ 2:03.75 ನಿಮಿಷದಲ್ಲಿ ಗುರಿ ತಲುಪಿದ್ದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. 2:03.20 ನಿಮಿಷದಲ್ಲಿ ಗುರಿ ತಲುಪಿದ ಶ್ರೀಲಂಕಾದ ತರುಷಿ ದಿಸ್ಸಾನಾಯಕಾ ಚಿನ್ನದ ಪದಕವನ್ನು ಈ ಸ್ಪರ್ಧೆಯಲ್ಲಿ ಗೆದ್ದುಕೊಂಡರು.

Story first published: Wednesday, October 4, 2023, 19:42 [IST]
Other articles published on Oct 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+