Asian Games: ಶೂಟಿಂಗ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಮಹಿಳಾ ತಂಡ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಬುಧವಾರವೂ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಶೂಟಿಂಗ್‌ನಲ್ಲಿ ಭಾರತದ ಮಹಿಳೆಯರ ತಂಡ ಚಿನ್ನದ ಪದಕ ಗೆದ್ದುಕೊಂಡಿದ್ದು ಮಹತ್ವದ ಸಾಧನೆ ಮಾಡಿದೆ. ಮಹಿಳೆಯದ 25 ಮೀಟರ್ ತಂಡ ವಿಭಾಗದಲ್ಲಿ ಭಾರತ ಈ ಚಿನ್ನದ ಪದಕ ಗೆದ್ದುಕೊಂಡಿದ್ದು ಮನು ಭಾಕರ್, ಇಶಾ ಸಿಂಗ್, ಮತ್ತು ರಿದಮ್ ಸಂಗ್ವಾನ್ ಅವರನ್ನು ಒಳಗೊಂಡ ಭಾತ ತಮಡ ಈ ಸಾಧನೆ ಮಾಡಿದೆ.
ಭಾರತವು ಒಟ್ಟು 1759 ಅಂಕಗಳನ್ನು ಗಳಿಸಿ ಚಿನ್ದ ಪದಕವನ್ನು ಕೊರಳಿಗೇರಿಸಿಕೊಂಡಿದೆ. 1756 ಅಂಕಗಳನ್ನು ಗಳಿಸಿದ ಚೀನಾ ಭಾರೀ ಪೈಪೋಟಿ ನಡೆಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ರಿಪಬ್ಲಿಕ್ ಆಫ್ ಕೊರಿಯಾ 1742 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಅರ್ಹತಾ ಸುತ್ತಿನಲ್ಲಿ ಮನು 590 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿವನ್ನು ಪಡೆದುಕೊಂಡಿದ್ದರು.

ಇನ್ನು ಮತ್ತೋರ್ವ ಶೂಟರ್ ಇಶಾ ಕೂಡ 586 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಗಳಿಸಿ ಶ್ಲಾಘನೀಯವಾಗಿ ಪ್ರದರ್ಶನ ನೀಡಿದರು. ರಿದಮ್ 583ರ ಘನ ಅಂಕಗಳ ಹೊರತಾಗಿಯೂ ಪ್ರತಿ ದೇಶಕ್ಕೆ ಕೇವಲ ಇಬ್ಬರು ಶೂಟರ್‌ಗಳಿಗೆ ಅವಕಾಶ ನೀಡುವ ನಿಯಮದಿಂದಾಗಿ ಫೈನಲ್‌ನಲ್ಲಿ ಕಣಕ್ಕಿಳಿಯುವ ಅವಕಾಶ ಕಳೆದುಕೊಂಡಿದ್ದರು. ಇನ್ನು ಮನು ಮೊದಲ ಅರ್ಹತೆ ತನ್ನದಾಗಿಸಿಕೊಂಡರೆ ಇಶಾ ಐದನೇ ಮತ್ತು ರಿದಮ್ ಸಾಂಗ್ವಾನ್ ಏಳನೇ ಅರ್ಹತೆ ಪಡೆದರು. ಮಹಿಳೆಯರ 25 ಮೀ ಪಿಸ್ತೂಲ್ ತಂಡದ ವೈಯಕ್ತಿಕ ಫೈನಲ್ ಪಂದ್ಯ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ ಪ್ರಾರಂಭವಾಗುತ್ತದೆ.
ಇನ್ನು ಇದಕ್ಕೂ ಮುನ್ನ ನಡೆದ 50 ಮೀಟರ್ ರೈಫಲ್ 3 ಪೊಸಿಷನ್ಸ್ ಮಹಿಳಾ ತಂಡ ವಿಭಾಗದಲ್ಲಿ ಭಾರತ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು. ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಅವರನ್ನು ಒಳಗೊಂಡ ತಂಡ ಅದ್ಭುತ ಪ್ರದರ್ಶನ ನೀಡಿ ಈ ಸಾಧನೆ ಮಾಡಿದೆ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ ಏಷ್ಯಾಡ್‌ನಲ್ಲಿ ಭಾರತದ ಪ್ರದರ್ಶನ ಗಮನಾರ್ಹವಾಗಿದ್ದು ನಾಲ್ಕು ಚಿನ್ನ, ಐದು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಒಳಗೊಂಡಿದ್ದು ಒಟ್ಟು 16 ಪದಕಗಳು ಭಾರತದ ಖಾತೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications