ಏಷ್ಯನ್ ಗೇಮ್ಸ್ 2018: ಕುಸ್ತಿಯಲ್ಲಿ ಪೂಜಾ ಧಂಡಾಗೆ ದಕ್ಕದ ಕಂಚು

ಜಕಾರ್ತಾ, ಆಗಸ್ಟ್ 20: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಮಹಿಳಾ ಕುಸ್ತಿಯಲ್ಲಿ ಭಾರತದ ಪೂಜಾ ಧಂಡಾ ಸ್ವಲ್ಪದರಲ್ಲಿ ಕಂಚು ಕಳೆದುಕೊಂಡಿದ್ದಾರೆ. ಪೂಜಾ ಮತ್ತು ಜಪಾನ್ ಕುಸ್ತಿಪಟು ಸಕಾಗಾಮಿ ವಿರುದ್ಧ ಕಂಚಿನ ಪದಕಕ್ಕಾಗಿ ಸ್ಪರ್ಧೆ ನಡೆದಿತ್ತು.
ಮಹಿಳಾ ವಿಭಾಗದಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದ ಸಾಕ್ಷಿ ಮಲಿಕ್ ಮತ್ತು ಪೂಜಾ ಧಂಡಾ ಸೋಮವಾರ ನಡೆದ ಸೆಮಿಫೈನಲ್ಸ್ ನಲ್ಲಿ ಸೋತಿದ್ದರು. ಹೀಗಾಗಿ 57ರ ಫ್ರೀ ಸ್ಟೈಲ್ ಕುಸ್ತಿ ಕಂಚಿನ ಪದಕಕ್ಕಾಗಿ ಸಕಾಗಾಮಿ ಮತ್ತು ಪೂಜಾ ನಡುವೆ ಸ್ಪರ್ಧೆ ನಡೆದಿತ್ತು. ಆದರೆ ಇದರಲ್ಲಿ 1-6 ಅಂತರದಿಂದ ಪೂಜಾ ಹಿನ್ನಡೆ ಅನುಭವಿಸಿದ್ದರು.
ಭಾನುವಾರ (ಆಗಸ್ಟ್ 19) ನಡೆದಿದ್ದ ಪುರುಷರ 65 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಬಜರಂಗ್ ಭಾರತಕ್ಕೆ ಚೊಚ್ಚಲ ಪದಕ ಗೆದ್ದಿದ್ದರು. ಆ ಬಳಿಕ ಸೋಮವಾರ ಮಹಿಳಾ ರಸ್ಲಿಂಗ್ 50 ಕೆಜಿ ಫ್ರೀಸ್ಟೈಲ್ ನಲ್ಲಿ ವಿನೇಶ್ ಫೋಗಟ್ ಭಾರತಕ್ಕೆ ಎರಡನೇ ಬಂಗಾರ ಜಯಿಸಿದ್ದರು.
ಸಾಕ್ಷಿ ಮಲ್ಲಿಕ್ ಮಲಿಕ್ ಕೂಡ ಕಂಚಿನ ಪದಕಕ್ಕಾಗಿ ನಡೆದ 62 ಕೆಜಿ ಸ್ಪರ್ಧೆಯಲ್ಲಿ ನಾರ್ತ್ ಕೊರಿಯನ್ ಎದುರು 2-12ರಿಂದ ಸೋತರು. ಶೂಟಿಂಗ್ ನಲ್ಲಿ ಒಂದು ಕಂಚು, ಎರಡು ಬೆಳ್ಳಿ, ಕುಸ್ತಿಯಲ್ಲಿ ಎರಡು ಪದಕ ಸೇರಿ ಭಾರತ ಖಾತೆಯಲ್ಲಿ ಒಟ್ಟು 5 ಪದಕಗಳಿವೆ. 5 ಪದಕಗಳ ಆಧಾರದಲ್ಲಿ ಭಾರತ 8ನೇ ಸ್ಥಾನದಲ್ಲಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications