ಏಷ್ಯನ್ ಗೇಮ್ಸ್: ಸೆಪಕ್ ಟಾಕ್ರಾದಲ್ಲಿ ಭಾರತಕ್ಕೆ ಕಂಚು

ಜಕಾರ್ತಾ, ಆಗಸ್ಟ್ 21: ಕಿಕ್ ವಾಲಿಬಾಲ್ ಎಂದು ಕರೆಯಲಾಗುವ ಸೆಪಕ್ ಟಾಕ್ರಾದಲ್ಲಿ ಭಾರತ ಮೊಟ್ಟ ಮೊದಲ ಪದಕ ಗಳಿಸಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಮಂಗಳವಾರ ನಡೆದ ಪುರುಷರ ಟೀಮ್ ರೆಗು ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಥಾಯ್ಲೆಂಡ್ ವಿರುದ್ಧ 0-2 ರಿಂದ ಸೋಲು ಅನುಭವಿಸಿ ಕಂಚಿನ ಪದಕಕ್ಕೆ ತೃಪ್ತಿ ಪಡೆದುಕೊಂಡಿತು.
ಏಷ್ಯನ್ ಗೇಮ್ಸ್ 2018ರ ವಿಶೇಷಪುಟಕ್ಕಾಗಿ ಕ್ಲಿಕ್ ಮಾಡಿ
ಸೋಮವಾರ ನಡೆದ ಪಂದ್ಯದಲ್ಲಿ ಇರಾನ್ ತಂಡದ ವಿರುದ್ಧ ಜಯಗಳಿಸಿದ್ದ ಭಾರತ, ಬಳಿಕ ಇಂಡೋನೇಷ್ಯಾ ಎದುರು ಸೋಲು ಅನುಭವಿಸಿತ್ತು. ಆದರೂ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದ ತಂಡ, ಪದಕ ಗಳಿಸುವುದು ಖಚಿತವಾಗಿತ್ತು.
ಸೆಪಕ್ ಟಾಕ್ರಾ ವಾಲಿಬಾಲ್ ಮಾದರಿಯ ಕ್ರೀಡೆಯಾಗಿದ್ದು, ಆಟಗಾರರು ಇಲ್ಲಿ ಕಾಲು, ತಲೆ, ಮೊಣಕಾಲು ಮತ್ತು ಎದೆಯಿಂದ ಚೆಂಡನ್ನು ನೆಟ್ ಆಚೆಗೆ ಹೊಡೆಯಬಹುದು. ಆಟಗಾರರು ಚೆಂಡಿಗೆ ಕೈ ತಾಗಿಸುವಂತಿಲ್ಲ.
1990ರಿಂದ ಈ ಕ್ರೀಡೆ ಏಷ್ಯನ್ ಗೇಮ್ಸ್‌ನಲ್ಲಿದ್ದು, ಥಾಯ್ಲೆಂಡ್ ಅತಿ ಹೆಚ್ಚು ಚಿನ್ನದ ಪದಕಗಳನ್ನು ಜಯಿಸಿದೆ. ಇದೇ ಮೊದಲ ಬಾರಿಗೆ ಭಾರತ ಈ ಕ್ರೀಡೆಯಲ್ಲಿ ಸ್ಪರ್ಧಿಸಿದ್ದಲ್ಲದೆ, ಪದಕವನ್ನೂ ಜಯಿಸಿದೆ.
ಏಷ್ಯಾಡ್ ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಥಾಯ್ಲೆಂಡ್, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ಎ ಗುಂಪಿನಲ್ಲಿದ್ದರೆ, ಭಾರತ, ಇರಾನ್ ಮತ್ತು ಇಂಡೋನೇಷ್ಯಾ ತಂಡಗಳು ಬಿ ಗುಂಪಿನಲ್ಲಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications