ಏಷ್ಯನ್ ಗೇಮ್ಸ್ 2018: ಭಾರತದ ಮಹಿಳಾ ಸ್ಕ್ವ್ಯಾಷ್ ತಂಡಕ್ಕೆ ಬೆಳ್ಳಿ ಪದಕ

ಜಕಾರ್ತಾ, ಸೆಪ್ಟೆಂಬರ್ 1: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯಾನ್ ಗೇಮ್ಸ್ ಕ್ರೀಡಾಕೂಟದ ಮಹಿಳಾ ಸ್ಕ್ವ್ಯಾಷ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ಲಭಿಸಿದೆ. ಭಾರತ ತಂಡ ಹಾಂಕಾಂಗ್ ಎದುರು 0-2ರ ಹಿನ್ನಡೆ ಅನುಭವಿಸಿತು.
ಸೆಪ್ಟಂಬರ್ 1ರ ಶನಿವಾರ ನಡೆದ ಸ್ಕ್ವ್ಯಾಷ್ ತಂಡ ಫೈನಲ್ ಸ್ಪರ್ಧೆಯಲ್ಲಿ ಭಾರತ, ಹಾಂಕಾಂಗ್ ಎದುರು ಸೋಲುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟಿತು. ಜೋಶ್ನಾ ಚಿನ್ನಪ್ಪ, ಸುನನ್ಯಾ ಕುರುವಿಲ್ಲ ಮತ್ತು ದೀಪಿಕಾ ಪಳ್ಳಿಕಲ್ ಅವರನ್ನು ತಂಡ ಒಳಗೊಂಡಿತ್ತು.
2014ರ ಸೌತ್ ಕೊರಿಯಾ ಇಂಚಿಯಾನ್ ಗೇಮ್ಸ್ ನಲ್ಲೂ ಭಾರತದ ಮಹಿಳಾ ಸ್ಕ್ವ್ಯಾಷ್ ತಂಡಕ್ಕೆ ಬೆಳ್ಳಿ ಪದಕ ಲಭಿಸಿತ್ತು. ಈ ಫಲಿತಾಂಶದೊಂದಿಗೆ ಭಾರತದ ಪದಕ ಪಟ್ಟಿಯಲ್ಲಿ ಒಟ್ಟು 68 ಪದಕಗಳು ಸೇರಿಕೊಂಡಿವೆ. ಭಾರತದ 8ನೇ ಸ್ಥಾನದಲ್ಲಿದೆ.
Story first published: Saturday, September 1, 2018, 15:35 [IST]
Other articles published on Sep 1, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications