ಏಷ್ಯನ್ ಗೇಮ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡ ಭಾರತ ಮಹಿಳಾ ರಗ್ಬಿ ಸೆವೆನ್ಸ್ ತಂಡ
ಭಾರತದ ಮಹಿಳಾ ರಗ್ಬಿ ಸೆವೆನ್ಸ್ ತಂಡ ಏಷ್ಯನ್ ಗೇಮ್ಸ್‌ನ ಮುಂಬರುವ ಆವೃತ್ತಿಗೆ ಅರ್ಹತೆ ಪಡೆದುಕೊಂಡಿದೆ. ಏಷ್ಯಾ ರಾಷ್ಟ್ರಗಳ ಪೈಕಿ ಏಳನೇ ಶ್ರೇಯಾಂಕವನ್ನು ಪಡೆಯುವ ಮೂಲಕ ಅರ್ಹತೆಯನ್ನು ಸಂಪಾದಿಸಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ನಡೆಯಲಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟ ನಡೆಯಲಿದೆ.
ಭಾರತ ಮಹಿಳಾ ರಗ್ಬಿ ತಂಡ ಕಳೆದ ಕೆಲ ವರ್ಷಗಳಿಮದ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದೆ. ಏಷ್ಯಾ ರಗ್ಬಿ 7ರ ಟ್ರೋಫಿ, ಏಷ್ಯಾ ರಗ್ಬಿ U20 ಚಾಂಪಿಯನ್‌ಶಿಪ್ ಮತ್ತು ಏಷ್ಯಾ ರಗ್ಬಿ U18 ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಮೂರು ಬೆಳ್ಳಿ ಪದಕಗಳನ್ನು ಗೆದ್ದಿದೆ. ಈ ಮೂಲಕ ಏಷ್ಯಾದ ಟೂರ್ನಿಗಳಲ್ಲಿ ಭಾರತ ತಂಡ ಸತತವಾಗಿ ಉತ್ತಮ ಪ್ರದರ್ಶನ ನೀಡಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ (ಐಒಎ) ನೀತಿಯ ವಿಶೇಷ ನೀತಿಯೊಂದನ್ನು ಅಳವಡಿಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಏಷ್ಯಾದ ಭಾಗವಹಿಸುವ ದೇಶಗಳ ಪೈಕಿ ಎಂಟನೇ ಶ್ರೇಯಾಂಕವನ್ನು ಸಾಧಿಸಿದ ತಂಡಗಳನ್ನು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಪರಿಗಣಿಸಬೇಕು ಎಂಬ ನೀತಿಯನ್ನು ಹೊಂದಿದೆ. ಅದರಲ್ಲಿ ಭಾರತದ ಮಹಿಳಾ ರಗ್ಬಿ ತಂಡ ಅರ್ಹತೆ ಗಿಟ್ಟಿಸಿಕೊಂಡಿದೆ.
"ಭಾರತೀಯ ರಗ್ಬಿ ಇತಿಹಾಸದಲ್ಲಿ ಇದೊಂದು ಮಹತ್ತರವಾದ ದಿನ. ನಮ್ಮ ಮಹಿಳಾ ತಂಡಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ. 7ನೇ ಶ್ರೇಯಾಂಕಿತರಾಗಿರುವ ನಮ್ಮ ಮಹಿಳಾ ತಂಡ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಕೋಲ್ಕತ್ತಾದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು ತಂಡ ಸೆಪ್ಟೆಂಬರ್ 20 ರಂದು ಚೀನಾದ ಹ್ಯಾಂಗ್‌ಝೌಗೆ ತೆರಳುವ ಮೊದಲು ಸುಮಾರು ಎರಡು ತಿಂಗಳ ಅವಧಿಯ ತರಬೇತಿ ಪಡೆದುಕೊಳ್ಳಲಿದೆ" ಎಂದು ಭಾರತೀಯ ರಗ್ಬಿ ಫುಟ್‌ಬಾಲ್ ಒಕ್ಕೂಟದ ಅಧ್ಯಕ್ಷ ರಾಹುಲ್ ಬೋಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications